ಬೆಳಗಾವಿ: ಪಂಜಾಬ್ ನಿಂದ ಅಕ್ಕಿ ತರಿಸಿ ಪಡಿತರ ವ್ಯವಸ್ಥೆಯಡಿ ವಿತರಿಸುತ್ತಿರುವುದು ಕ್ಯಾನ್ಸರ್ ಮಾತ್ರೆ ನೀಡಿದಂತೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸಿ ವಿತರಿಸಲು ಚಿಂತನೆ ನಡೆದಿದೆ. ರಾಜ್ಯದಲ್ಲಿ ಭತ್ತ ಬೆಳೆಯುವ ರೈತರಿಂದ ಕ್ವಿಂಟಾಲ್ಗೆ 1800 ರೂಪಾಯಿ ಬೆಂಬಲ ಬೆಲೆಯಲ್ಲಿ ಖರೀದಿಸಿ ಅಕ್ಕಿ ಮಾಡಿಸಲು ಬೇಕಾದ ಖರ್ಚನ್ನು ಸರ್ಕಾರ ಕೊಡಲಿದೆ. ಏಪ್ರಿಲ್ ನಂತರದಲ್ಲಿ ರಾಜ್ಯದ ಅಕ್ಕಿಯನ್ನು ಪಡಿತರ ವ್ಯವಸ್ಥೆಯಡಿ ವಿತರಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ ನಿಂದ ಪಡಿತರ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲಾಗುತ್ತದೆ. ಅಕ್ರಮ ಪಡಿತರ ಚೀಟಿ ರದ್ದುಪಡಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.