ಮಡಿಕೇರಿ: ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಲು ನಿಗದಿಪಡಿಸಿರುವ ಹೊರಗಿಡುವ ಮಾನದಂಡಗಳ ಆಧಾರದಲ್ಲಿ ವಾರ್ಷಿಕ ವರಮಾನ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಮಾಹಿತಿ ಪರಿಶೀಲಿಸಿ ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.
ಆದರೆ ಜಿಲ್ಲೆಯಲ್ಲಿ ಒಟ್ಟು 850 ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಆದಾಯವು ತಪ್ಪಾಗಿ ನಮೂದಾಗಿದ್ದು, ಈ ಪಡಿತರ ಚೀಟಿಗಳನ್ನು ಕಂದಾಯಾಧಿಕಾರಿಗಳ ಮುಖಾಂತರ ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಿ ಈ ಪಡಿತರ ಚೀಟಿಗಳನ್ನು ಬಿಪಿಎಲ್(ಆದ್ಯತಾ ಪಡಿತರ ಚೀಟಿ)ಗಳನ್ನಾಗಿಯೇ ಮುಂದುವರೆಸಲು ಸರ್ಕಾರವನ್ನು ಕೋರಲಾಗಿತ್ತು.
ಅದರಂತೆ ಸರ್ಕಾರವು 850 ಪಡಿತರ ಚೀಟಿಗಳನ್ನು ಆದ್ಯತಾ ಪಡಿತರ ಚೀಟಿಯನ್ನಾಗಿ ಮುಂದುವರೆಸಲು ಅನುಮತಿ ನೀಡಿ, ಪರಿವರ್ತನೆ ಕೂಡ ಮಾಡಿದೆ. ಈ 850 ಪಡಿತರ ಚೀಟಿದಾರರಿಗೆ ಮುಂದಿನ ಅಕ್ಟೋಬರ್ 2022 ರ ಮಾಹೆಯಿಂದ ಪಡಿತರ ಹಂಚಿಕೆ ಪ್ರಾರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.