ಆಹಾರಧಾನ್ಯ ಹಾಗೂ ಸರ್ಕಾರದ ಇತರೆ ಸೌಲಭ್ಯ ಪಡೆದುಕೊಳ್ಳಲು ಅಗತ್ಯವಾಗಿದ್ದ ಪಡಿತರ ಚೀಟಿ ವಿತರಣೆ ಕಾರ್ಯ ಸುಮಾರು 5 ವರ್ಷಗಳಿಂದ ಸ್ಥಗಿತವಾಗಿ ನಾಲ್ಕು ಲಕ್ಷಕ್ಕೂ ಅರ್ಜಿದಾರರು ತೊಂದರೆ ಅನುಭವಿಸುವಂತಹಾಗಿದೆ ಎಂದು ಹೇಳಲಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 2017 ರಿಂದ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಿದ್ದು, ಹೆಸರು ಸೇರ್ಪಡೆ ಸೇರಿದಂತೆ ಅನೇಕ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಿದರೂ ಪ್ರತಿಕ್ರಿಯೆ ಸಿಗುತ್ತಿಲ್ಲವೆನ್ನಲಾಗಿದೆ.
2019 ಮತ್ತು 2021ರಲ್ಲಿ ಕೋವಿಡ್ ಕಾರಣದಿಂದ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಲಾಗಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ, ಕೊರೋನಾದಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡುವ ಉದ್ದೇಶದಿಂದ 2021ರ ಅಕ್ಟೋಬರ್ ನಲ್ಲಿ ಪಡಿತರ ಚೀಟಿ ನೀಡಲು ಆಹಾರ ನಿರೀಕ್ಷಕರಿಗೆ ಅಧಿಕಾರ ನೀಡಲಾಗಿತ್ತು. ಇನ್ನೂ 2.76 ಲಕ್ಷ ಬಿಪಿಎಲ್ ಮತ್ತು 1.55 ಲಕ್ಷ ಎಪಿಎಲ್ ಅರ್ಜಿಗಳು ಬಾಕಿ ಇವೆ.
ಪಡಿತರ ಚೀಟಿ ಇಲ್ಲದ ಕಾರಣ ಪಡಿತರ ಸಿಗುತ್ತಿಲ್ಲ. ಮಾತ್ರವಲ್ಲ, ಗಂಗಾ ಕಲ್ಯಾಣ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಉದ್ಯೋಗ, ಶಿಕ್ಷಣ, ಆಯುಷ್ಮಾನ್ ಯೋಜನೆ, ತಾಯಿ ಕಾರ್ಡ್, ಹೆರಿಗೆ ಭತ್ಯೆ ಮೊದಲಾದವುಗಳಿಗೂ ಪಡಿತರ ಚೀಟಿ ಅಗತ್ಯವಾಗಿದ್ದು, ಪಡಿತರ ಚೀಟಿ ಇಲ್ಲದೆ ಈ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ ಎಂದು ಹೇಳಲಾಗಿದೆ.