ಬೆಂಗಳೂರು: ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲಾಗುತ್ತಿದೆ.
ಬ್ಯಾಂಕ್ ಖಾತೆ ಇಲ್ಲದ 21 ಲಕ್ಷ ಪಡಿತರ ಚೀಟಿದಾರರಿದ್ದು ಅಂತಹ ಪಡಿತರ ಚೀಟಿದಾರರಿಗೆ ಸರ್ಕಾರದಿಂದಲೇ ಬ್ಯಾಂಕ್ ಅಕೌಂಟ್ ಮಾಡಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಬ್ಯಾಂಕ್ ಖಾತೆ ಇಲ್ಲದವರಿಗೆ ಸರ್ಕಾರದಿಂದಲೇ ಅಕೌಂಟ್ ಮಾಡಿಸಲಾಗುತ್ತಿದೆ. ಜುಲೈನಲ್ಲಿ 3.45 ಕೋಟಿ ಜನರಿಗೆ 566 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಆಗಸ್ಟ್ ನಲ್ಲಿ 3.69 ಕೋಟಿ ಪಡಿತರ ಚೀಟಿದಾರರಿಗೆ 606 ಕೋಟಿ ರೂ. ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.
ಬ್ಯಾಂಕ್ ಖಾತೆ ಇಲ್ಲದ 21 ಲಕ್ಷ ಪಡಿತರ ಚೀಟಿದಾರರಿದ್ದು, 2 ಲಕ್ಷ ಜನರಿಗೆ ನಾವೇ ಖಾತೆ ಮಾಡಿಸಿದ್ದೇವೆ. ಇನ್ನು 14 ಲಕ್ಷ ಜನರಿಗೆ ಖಾತೆ ಮಾಡಿಸಲಾಗುತ್ತಿದೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.