alex Certify ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಅಕ್ರಮ ತಡೆಗೆ ಸರ್ಕಾರದ ಮಹತ್ವದ ಕ್ರಮ: ‘ಮೇರಾ ರೇಷನ್’ ಆಪ್ ಅಭಿವೃದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಅಕ್ರಮ ತಡೆಗೆ ಸರ್ಕಾರದ ಮಹತ್ವದ ಕ್ರಮ: ‘ಮೇರಾ ರೇಷನ್’ ಆಪ್ ಅಭಿವೃದ್ಧಿ

ಬೆಂಗಳೂರು: ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸುತ್ತಿದೆ.

ಆದರೆ, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ಹಾಗೂ ಅನಾಮಿಕ ವ್ಯಕ್ತಿಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಡಿತರ ಎತ್ತುವಳಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮೇರಾ ರೇಷನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್, 23. 96 ಲಕ್ಷ ಎಪಿಎಲ್, 10.90 ಲಕ್ಷ ಅಂತ್ಯೋದಯ ಪಡಿತರ ಚೀಟಿದಾರರು ಸೇರಿ ಸುಮಾರು 1.50 ಕೋಟಿ ರೇಷನ್ ಕಾರ್ಡ್ ದಾರರು ಇದ್ದಾರೆ. ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಹೆಸರಿನಲ್ಲಿ ಅನಾಮಿಕ ವ್ಯಕ್ತಿಗಳು, ಪರವಾನಿಗೆ ನವೀಕರಣ ಆಗದ ನ್ಯಾಯಬೆಲೆ ಅಂಗಡಿಗಳು, ಕನ್ಸ್ಯೂಮರ್ ಕ್ರೆಡಿಟ್ ಸೊಸೈಟಿಗಳು ಪ್ರತಿ ತಿಂಗಳು ಪಡಿತರ ಧಾನ್ಯ ಎತ್ತುವಳಿ ಮಾಡುತ್ತಿದ್ದು, ಆಹಾರ ಭದ್ರತಾ ಯೋಜನೆಯಡಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ.

ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮೇರಾ ರೇಷನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಪಡಿತರ ಚೀಟಿಯ ಸಂಖ್ಯೆ ನಮೂದಿಸಿದಲ್ಲಿ ಪಡಿತರ ಹಂಚಿಕೆ ಸೇರಿದಂತೆ ಇತರೆ ಮಾಹಿತಿಗಳು ಸಿಗುತ್ತವೆ. ನ್ಯಾಯಬೆಲೆ ಅಂಗಡಿ ಮಾಲೀಕರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೇರಾ ರೇಷನ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಅದರಲ್ಲಿ ಕೋರಲಾದ ಮಾಹಿತಿಗಳನ್ನು ದಾಖಲಿಸಬೇಕಿದೆ. ಆಹಾರ ಇಲಾಖೆಯಿಂದ ವಂಚನೆ ತಡೆಗೆ ಮತ್ತು ಪಾರದರ್ಶಕವಾಗಿ ಪಡಿತರ ಹಂಚಿಕೆ ಮಾಡುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ನ್ಯಾಯಬೆಲೆ ಅಂಗಡಿಗಳ ವಿವರವನ್ನು ಅಪ್ಲೋಡ್ ಮಾಡುವಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚಿಸಲಾಗಿದೆ.

ಭಾರತ ಅಹಾರ ನಿಗಮದ ಗೋದಾಮಗಳಿಂದ ಸಗಟು ಮಳಿಗೆಗಳಿಗೆ ಆಹಾರ ಧಾನ್ಯಗಳನ್ನು ಸರಕು ಲಾರಿಯಲ್ಲಿ ಸಾಗಿಸುವ ವೇಳೆ ಕಳವು ಮಾಡುವುದು, ಅಕ್ರಮ ದಾಸ್ತಾನು, ಹೆಚ್ಚುವರಿ ದಾಸ್ತಾನು ಸಂಗ್ರಹ ಮೊದಲಾದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...