ಬೆಂಗಳೂರು: ಅನ್ನಭಾಗ್ಯ ಯೋಜನೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಎರಡನೇ ಕಂತಿನ ಹಣ ಸಂದಾಯ ಮಾಡಲಾಗುತ್ತಿದೆ.
ರಾಜ್ಯದ್ಯಂತ 1.03 ಕೋಟಿ ಕಾರ್ಡ್ ಗಳಿದ್ದು, 3.69 ಕೋಟಿ ಫಲಾನುಭವಿಗಳಿಗೆ 605 ಕೋಟಿ ರೂಪಾಯಿ ಪಾವತಿಸಲಾಗುವುದು. 31 ಜಿಲ್ಲೆಗಳಲ್ಲಿ ರಾಮನಗರ, ಬೀದರ್, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಫಲಾನುಭವಿಗಳಿಗೆ ಹಣ ಪಾವತಿಸಲಾಗಿದ್ದು, ಉಳಿದ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಮುಂದಿನ 5 ದಿನಗಳಲ್ಲಿ ಹಣ ಸಂದಾಯ ಮಾಡಲಾಗುತ್ತದೆ.
ಬಿಪಿಎಲ್ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯರಿಗೆ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಡಿಬಿಟಿ ಮೂಲಕ ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಅಂತ್ಯೋದಯ ಕಾರ್ಡ್ ನಲ್ಲಿ ನಾಲ್ವರು ಸದಸ್ಯರಿದ್ದರೆ 170 ರೂ., 5 ಸದಸ್ಯರಿದ್ದರೆ 510 ರೂ., 6 ಸದಸ್ಯರಿದ್ದರೆ 850 ರೂ. ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.