alex Certify ಹೊಸ ಜೀವನ ನೀಡಿದ ಉದ್ಯಮಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪ್ರೀತಿಯ ಶ್ವಾನ ‘ಗೋವಾ’: ನಾಯಿಗೆ ಹುಷಾರಿಲ್ಲದ್ದಕ್ಕೆ ‘ರಾಜ’ ಕರೆದರೂ ಹೋಗಿರಲಿಲ್ಲ ರತನ್ ಟಾಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಜೀವನ ನೀಡಿದ ಉದ್ಯಮಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪ್ರೀತಿಯ ಶ್ವಾನ ‘ಗೋವಾ’: ನಾಯಿಗೆ ಹುಷಾರಿಲ್ಲದ್ದಕ್ಕೆ ‘ರಾಜ’ ಕರೆದರೂ ಹೋಗಿರಲಿಲ್ಲ ರತನ್ ಟಾಟಾ

ಮುಂಬೈ: ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಸೆಲೆಬ್ರಿಟಿಗಳು ಮತ್ತು ಪ್ರಮುಖ ರಾಜಕೀಯ ನಾಯಕರ ನಡುವೆ ವಿಶೇಷವಾಗಿ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್(ಎನ್‌ಸಿಪಿಎ) ಲಾನ್ಸ್‌ ಗೆ ಆಗಮಿಸಿದ್ದು ಪ್ರೀತಿಯ ಶ್ವಾನ ‘ಗೋವಾ’.

ರತನ್ ಟಾಟಾ ಅವರ ಸಾಕು ನಾಯಿ ಗೋವಾ ತನ್ನ ಮಾಲೀಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದೆ. ನಿಷ್ಠೆಯ ಪ್ರದರ್ಶನದಲ್ಲಿ ‘ಗೋವಾ’ ತನಗೆ ಮನೆ ಮತ್ತು ಹೊಸ ಜೀವನವನ್ನು ನೀಡಿದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಉದ್ಯಮಿ ರತನ್ ಟಾಟಾ ಅವರು ಬೀದಿ ನಾಯಿಗಳ ಮೇಲೆ ಹೆಚ್ಚಿನ ಕಾಳಜಿ, ಪ್ರೀತಿಯನ್ನು ಹೊಂದಿದ್ದರು. ಬೀದಿ ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿದ್ದ ಅವರು ಅವುಗಳ ರಕ್ಷಣೆ, ಆರೈಕೆಗಾಗಿ ನೆರವು ನೀಡಿದ್ದರು. ವಾರಸುದಾರರಿಲ್ಲದ ಸಾಕು ಪ್ರಾಣಿಗಳ ಕಲ್ಯಾಣ ಮತ್ತು ಅವುಗಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದರು.

ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಬೀದಿ ನಾಯಿಗಳು ಹೆಚ್ಚಾಗಿ ಕಾರುಗಳ ಅಡಿಯಲ್ಲಿ ಆಶ್ರಯ ಪಡೆಯುತ್ತವೆ. ಇಂತಹುದೇ ಸಂದರ್ಭದಲ್ಲಿ ಅವರು ಅನೇಕ ನಾಯಿಗಳನ್ನು ರಕ್ಷಿಸಿದ್ದರು.

ರತನ್ ಟಾಟಾ ಅವರು ನಾಯಿಗೆ ‘ಗೋವಾ’ ಎಂದು ಏಕೆ ಹೆಸರಿಟ್ಟರು ಎಂಬುದರ ಹಿಂದೆ ಒಂದು ಕಥೆ ಇದೆ ಎಂಬುದು ಕುತೂಹಲಕಾರಿಯಾಗಿದೆ. ಟಾಟಾ ಗ್ರೂಪ್‌ನ ಕಾರ್ಪೊರೇಟ್ ಹೆಡ್‌ಕ್ವಾರ್ಟರ್ಸ್‌ನ ಬಾಂಬೆ ಹೌಸ್‌ನಲ್ಲಿ ಕಚೇರಿ ಸಹಚರರಾಗಿದ್ದವರಿಗೆ ಈ ನಾಯಿ ಕೇವಲ ಸಾಕುಪ್ರಾಣಿಯಾಗಿತ್ತು.

ರತನ್ ಟಾಟಾ ಅವರು ಗೋವಾ ಪ್ರವಾಸದ ಸಮಯದಲ್ಲಿ ಈ ನಾಯಿಯನ್ನು ರಕ್ಷಿಸಿದ್ದರು ಮತ್ತು ಮುಂಬೈಗೆ ಕರೆತರಲು ನಿರ್ಧರಿಸಿದರು, ಅದನ್ನು ರಕ್ಷಿಸಿದ ಸ್ಥಳದ ಹೆಸರನ್ನೇ ನಾಯಿಗೆ ಇಟ್ಟಿದ್ದರು, ನಂತರ ಅವರ ಜೀವನದಲ್ಲಿ ‘ಗೋವಾ’ ಅಚ್ಚುಮೆಚ್ಚಿನದಾಗಿತ್ತು. ಟಾಟಾ ಅವರ ಮನೆಯಲ್ಲಿ ಇತರ ನಾಯಿಗಳು ಸೇರಿಕೊಂಡವು.

ರತನ್ ಟಾಟಾ ಒಮ್ಮೆ Instagram ನಲ್ಲಿ “ಈ ದೀಪಾವಳಿಯಲ್ಲಿ ದತ್ತು ಪಡೆದ ಬಾಂಬೆ ಹೌಸ್ ನಾಯಿಗಳೊಂದಿಗೆ ಕೆಲವು ಹೃದಯಸ್ಪರ್ಶಿ ಕ್ಷಣಗಳು, ವಿಶೇಷವಾಗಿ ‘ಗೋವಾ’ ನನ್ನ ಕಚೇರಿ ಒಡನಾಡಿ ಎಂದು ಹಂಚಿಕೊಂಡಿದ್ದಾರೆ,

ರತನ್ ಟಾಟಾ ಅವರ ಈ ಬಂಧವು ಮಾನವ ಸಂಬಂಧವನ್ನು ಮೀರಿದೆ ಎಂಬುದು ಗಮನಿಸಬೇಕಾದ ಸಂಗತಿ. 2018 ರಲ್ಲಿ ಕಿಂಗ್ ಚಾರ್ಲ್ಸ್ III(ಅಂದಿನ ಪ್ರಿನ್ಸ್ ಚಾರ್ಲ್ಸ್) ಅವರಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲು ಅವರನ್ನು ಆಹ್ವಾನಿಸಿದಾಗ, ಟಾಟಾ ಅವರು ಕೊನೆಯ ಗಳಿಗೆಯಲ್ಲಿ ತಮ್ಮ ಪ್ರವಾಸ ರದ್ದುಗೊಳಿಸಿದರು. ಏಕೆಂದರೆ ಅವರ ಒಂದು ನಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ಹೀಗಾಗಿ ಪ್ರವಾಸವನ್ನೇ ರದ್ದುಗೊಳಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...