ಏರ್ ಇಂಡಿಯಾವನ್ನು ಮರಳಿ ಖರೀದಿ ಮಾಡುವವರೆಗೂ, ದೇಶದ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ ಟಾಟಾ ಸಮೂಹದ ಹಿಂದಿನ ಶಕ್ತಿಯಾದ ರತನ್ ಟಾಟಾ ದೇಶ ಕಂಡ ಅತ್ಯಂತ ಯಶಸ್ವೀ ಉದ್ಯಮಿಯಲ್ಲಿ ಒಬ್ಬರು.
ಆದರೆ ಇದೇ ರತನ್ ಟಾಟಾ ಮುಂಬೈ, ಶಿಮ್ಲಾ ಹಾಗೂ ನ್ಯೂಯಾರ್ಕ್‌ನಲ್ಲಿ ತಮ್ಮ ಶಿಕ್ಷಣ ಮುಗಿಯುತ್ತಲೇ ರೆಸ್ಟೋರೆಂಟ್ ಗಳಲ್ಲಿ ಪಾತ್ರೆಗಳನ್ನು ತೊಳೆದಿದ್ದರು ಎಂಬುದು ನಿಮಗೆ ಗೊತ್ತೇ..?
ಭಾರತದ ಎರಡು ನಗರಗಳಲ್ಲಿ ಶಿಕ್ಷಣ ಪೂರೈಸಿದ ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ ರತನ್ ಟಾಟಾ ಉನ್ನತ ಶಿಕ್ಷಣ ಪಡಿದಿದ್ದರೂ ಸಹ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡಿಕೊಂಡು ಇದ್ದರು.
ಬಿಜೆಪಿ ಶಾಸಕ ಯತ್ನಾಳ್ ಸಿಡಿ ಬಿಡುಗಡೆಗೆ ಕ್ಷಣಗಣನೆ ಫೋಟೋ ವೈರಲ್: ಕ್ರಮಕ್ಕೆ ಒತ್ತಾಯಿಸಿ ದೂರು
ಡಿಸೆಂಬರ್ 28, 1937ರಲ್ಲಿ ಜನಿಸಿದ ರತನ್ ಟಾಟಾ ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಮುಂಬೈನ ಚಾಂಪಿಯನ್ ಶಾಲೆಯಲ್ಲಿ ಪೂರೈಸಿದ್ದು, ಮುಂದಿನ ಕೆಲ ವರ್ಷಗಳ ಮಟ್ಟಿಗೆ ಕೆಥೆಡ್ರಲ್ ಹಾಗೂ ಜಾನ್ ಕನ್ನನ್ ಶಾಲೆಯಲ್ಲಿ ಅಧ್ಯಯನ ನಡೆಸಿದ್ದಾರೆ. ಶಿಮ್ಲಾದ ಬಿಷಪ್ ಕಾಟನ್ ಶಾಲೆಯಲ್ಲಿ ಮುಂದಿನ ಶಿಕ್ಷಣ ಪೂರೈಸಿದ ಬಳಿಕ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಿದ್ದರು ರತನ್.
1955ರಲ್ಲಿ ನ್ಯೂಯಾರ್ಕ್‌ನ ರಿವರ್‌ಡೇಲ್ ಕೌಂಟಿ ಶಾಲೆಯಿಂದ ಪದವಿ ಪಡೆದ ರತನ್ ಟಾಟಾ ನ್ಯೂಯಾರ್ಕ್‌ನ ಕಾರ್ನೆಲ್ ವಿವಿಯಲ್ಲಿ ವಾಸ್ತುಶಿಲ್ಪದಲ್ಲಿ ಪದವಿಯನ್ನು 1959ರಲ್ಲಿ ಪೂರೈಸಿದ್ದಾರೆ. ಹಾರ್ವಡ್ ಬ್ಯುಸಿನೆಸ್ ಶಾಲೆಯಲ್ಲಿ ಸುಧಾರಿತ ನಿರ್ವಹಣಾ ವ್ಯಾಸಂಗವನ್ನೂ ಸಹ ರತನ್ ಟಾಟಾ ಪೂರೈಸಿದ್ದಾರೆ.
ಜಿಲ್ಲೆಗಳಲ್ಲೂ ಕೊರೋನಾ ಭಾರಿ ಇಳಿಕೆ, ಇಲ್ಲಿದೆ ಮಾಹಿತಿ
ಕಾಲೇಜು ದಿನಗಳಲ್ಲಿ ವಿಮಾನಗಳ ಬಗ್ಗೆ ವಿಪರೀತ ಆಸಕ್ತಿ ಬೆಳೆಸಿಕೊಂಡಿದ್ದ ಟಾಟಾ, ಆ ದಿನಗಳಲ್ಲಿ ಹಾರುವ ಅವಕಾಶ ಸಿಕ್ಕರೂ ಸಹ ಸಾಕಷ್ಟು ಹಣವಿಲ್ಲದ ಕಾರಣ ವಿಮಾನವೇರಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ತರಬೇತಿ ಅಕಾಡೆಮಿ ಸೇರಲು ಬಯಸಿದ ಟಾಟಾ, ಅದರ ಶುಲ್ಕವನ್ನು ಸಂಪಾದನೆ ಮಾಡಲು ಕೆಲಸಕ್ಕೆ ಸೇರಲು ನಿರ್ಧರಿಸಿದ್ದರು. ಅಮೆರಿಕದಲ್ಲಿ ಹತ್ತು ವರ್ಷಗಳ ಕಾಲ ಇದ್ದ ತಮ್ಮ ಖರ್ಚು ಭರಿಸಲು ಟಾಟಾ, ರೆಸ್ಟೋರೆಂಟ್ ನಲ್ಲಿ ಪಾತ್ರೆ ತೊಳೆಯುವುದೂ ಸೇರಿದಂತೆ ಅನೇಕ ಪಾರ್ಟ್ ಟೈಂ ಕೆಲಸಗಳನ್ನು ಮಾಡಿದ್ದಾರೆ.