
ಉದ್ಯಮಿ ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿಯು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೇವಲ ಒಂದು ಖಾತೆಯನ್ನು ಮತ್ತು ಟ್ವಿಟರ್ನಲ್ಲಿ ಸುಮಾರು 27 ಖಾತೆಗಳನ್ನು ಅನುಸರಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ?
ಹೌದು, ನೀವು ಸರಿಯಾಗಿ ಓದಿದ್ದೀರಿ. ರತನ್ ಟಾಟಾ ಅವರು ಕೇವಲ ಒಂದು ಇನ್ಸ್ಟಾಗ್ರಾಮ್ ಖಾತೆಯನ್ನು ಅನುಸರಿಸಿದ್ದಾರೆ. ಅದು “ಟಾಟಾ ಟ್ರಸ್ಟ್” ಖಾತೆ ಮಾತ್ರ.
ಇನ್ಸ್ಟಾಗ್ರಾಮ್ನಲ್ಲಿ ಟಾಟಾ ಟ್ರಸ್ಟ್ 400+ ಅನುಯಾಯಿಗಳನ್ನು ಹೊಂದಿದೆ ಮತ್ತು ಖಾತೆಯು ರತನ್ ಟಾಟಾ ಅವರನ್ನು ಹಿಂಬಾಲಿಸುತ್ತದೆ ಮತ್ತು 31 ಇತರರನ್ನು ಅನುಸರಿಸುತ್ತದೆ.
ಅಂದಹಾಗೆ, ರತನ್ ಟಾಟಾ ಅವರು ಅನೇಕ ಕಂಪೆನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.
ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷರಾದ ಅವರು ಚಿಂತನೆ ಮತ್ತು ಶಕ್ತಿಯಲ್ಲಿ ದೊಡ್ಡ ನಂಬಿಕೆಯುಳ್ಳವರು. ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ಮೋಟಾರ್ಸ್ನೊಂದಿಗೆ ಐತಿಹಾಸಿಕ ಒಪ್ಪಂದವನ್ನು ಪಡೆಯಲು ಸಾಧ್ಯವಾಯಿತು. ಇವರ ಇನ್ಸ್ಟಾಗ್ರಾಮ್ ಖಾತೆಯನ್ನು 8.5 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ.