ಬೆಂಗಳೂರು : ಕನ್ನಡವನ್ನು ಬೆಳೆಸುವಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕೊಡುಗೆ ಅಪಾರ-ಅನನ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ ಕುವೆಂಪು ಅವರ ಆಪ್ತ ಶಿಷ್ಯನಾಗಿ ಕನ್ನಡವನ್ನು ಬೆಳೆಸುವಲ್ಲಿ, ವಿಶ್ವಮಾನವ ಪ್ರೀತಿಯನ್ನು ಸಂರಕ್ಷಿಸುವಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕೊಡುಗೆ ಅಪಾರ ಮತ್ತು ಅನನ್ಯ ಎಂದರು.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಜಿ.ಎಸ್.ಎಸ್ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದ ನೆನಪು ಇಂದಿಗೂ ಹಸಿರಾಗಿದೆ. ನಾಡು, ನುಡಿ ಮತ್ತು ಕನ್ನಡಿಗರ ಹಿತರಕ್ಷಣೆಯ ನಮ್ಮ ಹೋರಾಟಕ್ಕೆ ಇಂತಹ ಹಿರಿಯ ಜೀವಗಳು ಸದಾ ಸ್ಪೂರ್ತಿ ಎಂದಿದ್ದಾರೆ.