
ಸಿನಿಮಾ ಬಿಡುಗಡೆಯ ತಯಾರಿಯಲ್ಲಿ ಬ್ಯುಸಿ ಇರುವ ನಡುವೆಯೇ ರಶ್ಮಿಕಾ ತಮ್ಮ ಮುದ್ದಿನ ನಾಯಿಮರಿಯೊಂದಿಗೆ ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರಶ್ಮಿಕಾ ಶೇರ್ ಮಾಡಿರುವ ಫೋಟೋದಲ್ಲಿ ಶ್ವಾನವು ರಶ್ಮಿಕಾರಿಗೆ ಮುತ್ತು ನೀಡುತ್ತಿರೋದನ್ನು ಕಾಣಬಹುದಾಗಿದೆ.
ಈ ಫೋಟೋಗೆ ರಶ್ಮಿಕಾ, ಮನೆಗೆ ಸ್ವಾಗತಿಸುವ ಮುತ್ತು. ನಾನು ಮರಳಿದ್ದೇನೆ. ಎಂದು ಶೀರ್ಷಿಕೆ ನೀಡಿದ್ದಾರೆ. ಈ ಮುದ್ದಾದ ಫೋಟೋಗೆ ಪ್ರಾಣಿ ಪ್ರಿಯರು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಪುಷ್ಪಾ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ತೆರೆ ಮೇಲೆ ಬರಲಿದ್ದಾರೆ. ಈ ಸಿನಿಮಾದಲ್ಲಿ ಅವರು ಅಲ್ಲು ಅರ್ಜುನ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್, ಟೀಸರ್ ಹಾಗೂ ಪೋಸ್ಟರ್ಗಳು ರಿಲೀಸ್ ಆಗಿದ್ದು ಇವುಗಳಲ್ಲಿ ರಶ್ಮಿಕಾ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಈ ಸಿನಿಮಾದಲ್ಲಿ ಮೀನುಗಾರ ಮಹಿಳೆಯಾಗಿ ನಟಿಸಿದ್ದರೆ ಅಲ್ಲು ಅರ್ಜುನ್ ಸ್ಮಗ್ಲರ್ ಆಗಿ ನಟಿಸಿದ್ದಾರಂತೆ.
ಈ ಸಿನಿಮಾದಲ್ಲಿ ಸಮಂತಾ ರುಥ್ ಪ್ರಭು ವಿಶೇಷವಾದ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿನ ಶೂಟಿಂಗ್ ಸದ್ಯ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಈ ಸಿನಿಮಾ ಡಿಸೆಂಬರ್ 17ರಂದು ತೆರೆಗಪ್ಪಳಿಸಲಿದೆ.