
ಬಾಲಿವುಡ್ಗೆ ಎಂಟ್ರಿಯಾಗಿರೋ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಪ್ರೊಜೆಕ್ಟ್ಗಳನ್ನ ಮಾಡುತ್ತಿದ್ದಾರೆ.
ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಸಿದ್ಧಾರ್ಥ ಈ ಘಟಾನುಘಟಿ ನಟರ ಜೊತೆ ನಟಿಸುತ್ತಿದ್ದಾರೆ. ಇತ್ತಿಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ರಶ್ಮಿಕಾ ಮಂದಣ್ಣ, ಕಾರ್ಯಕ್ರಮ ಮುಗಿಸಿಕೊಂಡು ಹೊರ ಬಿದ್ದ ತಕ್ಷಣ, ಫೋಟೋಗ್ರಾಫರ್ಗಳು ಅವರ ಫೋಟೋ ತೆಗೆಯುವುದಕ್ಕೆ ಮುಗಿಬೀಳುತ್ತಾರೆ. ಅದೇ ಸಮಯದಲ್ಲಿ ಅಭಿಮಾನಿಯೊಬ್ಬ ರಶ್ಮಿಕಾ ಜೊತೆ ಸೆಲ್ಫಿ ತೆಗೆದುಕೊಳ್ಳೋದಕ್ಕೆ ಮುಂದೆ ಬರುತ್ತಾನೆ. ಆಗ ರಶ್ಮಿಕಾ ನಡೆದುಕೊಂಡ ರೀತಿ ಅಲ್ಲಿದ್ದವರೆಲ್ಲ ಬೆರಗಾಗುವಂತೆ ಮಾಡಿತ್ತು.
ಅಸಲಿಗೆ ಆ ವ್ಯಕ್ತಿ ನಟಿ ರಶ್ಮಿಕಾ ಮಂದಣ್ಣನವರ ಪಕ್ಕಾ ಅಭಿಮಾನಿ. ಜನರ ನೂಕುನುಗ್ಗಲಿನಲ್ಲೂ ಆತನಿಗೆ ರಶ್ಮಿಕಾ ಜೊತೆ ಇರೋ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅನ್ನೋ ಆಸೆ. ಆತ ಹತ್ತಿರ ಬರ್ತಿದ್ದ ಹಾಗೆಯೇ ರಶ್ಮಿಕಾ ಮಂದಣ್ಣ ಬಾಡಿಗಾರ್ಡ್ ಆ ವ್ಯಕ್ತಿಯನ್ನ ದೂರ ತಳ್ಳಿದ್ದಾನೆ. ಆಗ ರಶ್ಮಿಕಾ ಬೇಡ ಬೇಡ ಹಾಗೆ ತಳ್ಳಬೇಡಿ ಅಂತ ತನ್ನ ಬಾಡಿಗಾರ್ಡ್ಗೆ ಹೇಳಿ ಆ ವ್ಯಕ್ತಿಯ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಯ ಜೊತೆ ನಡೆದುಕೊಂಡ ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ಸಿನಿಸ್ಟಾರ್ಸ್ರಂತೆ, ಸೌತ್ ಇಂಡಿಯನ್ ನಟ-ನಟಿಯರಿಗೆ ಅಹಂ ಇಲ್ಲ ಅಂತ ಕಾಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ದಕ್ಷಿಣ ಭಾರತದ ನಟ-ನಟಿಯರಿಂದ ಬಾಲಿವುಡ್ ನಟರು ಕಲಿಯುವ ಪಾಠ ತುಂಬಾ ಇದೆ ಅಂತ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಹಾಕುತ್ತಿದ್ದಾರೆ.