ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಿಮಿತ್ತ ಅವರು ಮುಂಬೈನಲ್ಲಿ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದರು. ಬಾಲಿವುಡ್ ಮತ್ತು ಹಲವಾರು ತಾರೆಯರು ರೆಡ್ ಕಾರ್ಪೆಟ್ ಮೇಲೆ ನಡೆದು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ತಾರೆಗಳಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ನಟಿ ರಶ್ಮಿಕಾ ಮಂದಣ್ಣ ಕೂಡ ಇದ್ದರು. ಕಪ್ಪು ಗೌನ್ ಧರಿಸಿದ ರಶ್ಮಿಕಾ ಪಾರ್ಟಿಯಲ್ಲಿ ಮಿಂಚಿದ್ದಾರೆ. ಆದರೆ, ನೆಟ್ಟಿಗರು ಅವರ ಉಡುಗೆಯಿಂದ ಆಕರ್ಷಿತರಾದಂತೆ ಕಂಡುಬಂದಿಲ್ಲ. ಒಂದು ಭುಜದ ಕಪ್ಪು ಕಟೌಟ್ ಡ್ರೆಸ್ ಮತ್ತು ತೊಡೆಯಿಂದ ಕೆಳಗಿನವರೆಗೆ ಸೀಳನ್ನು ಉಡುಪು ಒಳಗೊಂಡಿತ್ತು. ಇದಕ್ಕೆ ಒಂದು ಜೋಡಿ ಕಪ್ಪು ಹೀಲ್ಸ್ ಮತ್ತು ಬಟ್ಟೆಗೆ ಒಪ್ಪುವ ಕಿವಿಯೋಲೆ ಧರಿಸಿ ಪಾರ್ಟಿಗೆ ಆಗಮಿಸಿದ್ದರು.
ಪಾರ್ಟಿಗೆ ಗ್ಲಾಮರಸ್ ಉಡುಗೆಯಲ್ಲಿ ಆಗಮಿಸಿದ ರಶ್ಮಿಕಾರನ್ನು ಕಂಡ ನೆಟ್ಟಿಗರಿಗೆ ನಟಿ, ಉಡುಪಿನಿಂದ ಅನಾನುಕೂಲವಾಗಿದ್ದಂತೆ ಕಂಡುಬಂದಿದೆ. ರಶ್ಮಿಕಾ ತುಂಬಾ ಅಹಿತಕರವಾಗಿ ಕಾಣುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. ಇಂತಹ ಉಡುಪು ಅನಾನುಕೂಲವಾಗಿದ್ದರೆ, ಯಾಕೆ ಧರಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಈ ಪಾರ್ಟಿಯಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಭಾಗವಹಿಸಿದ್ದರು.