
ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಸಿನಿರಂಗದಲ್ಲೂ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ಗೂ ಹೆಜ್ಜೆ ಇಟ್ಟಿರುವ ರಶ್ಮಿಕಾ ಮಂದಣ್ಣ ಅಲ್ಲಿಯೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ರಶ್ಮಿಕಾ ಮಂದಣ್ಣ, ಆಗಾಗ ತಮ್ಮ ಸುಂದರ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಇದೀಗ ಮತ್ತೊಂದು ಫೋಟೋ ಹಾಕಿ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ ರಶ್ಮಿಕಾ ಮಂದಣ್ಣ.
ಈ ಫೋಟೋದಲ್ಲಿ ಗುಲಾಬಿ ಬಣ್ಣದ ಸೀರೆಯುಟ್ಟು ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದು, ನೆಚ್ಚಿನ ನಟಿಯ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾಮೆಂಟ್ ಬಾಕ್ಸ್ ನ್ನು ಹೃದಯದ ಎಮೋಜಿಗಳಿಂದ ತುಂಬಿಸಿದ್ದಾರೆ.



