ಅಫ್ಘಾನಿಸ್ತಾನದ ಚಿತ್ರಣ ಭಯ ಹುಟ್ಟಿಸುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಈ ಮಧ್ಯೆ ಜನರು ದೇಶ ತೊರೆಯುವ ಆತುರದಲ್ಲಿದ್ದಾರೆ. ಈ ಮಧ್ಯೆ ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್, ಇಂಗ್ಲೆಂಡ್ ನಲ್ಲಿ ದಿ ಹಂಡ್ರೆಡ್ ನಲ್ಲಿ ಆಡ್ತಿದ್ದಾರೆ.
ರಶೀದ್ ಕುಟುಂಬಸ್ಥರು ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದಾರೆ. ಸಾಕಷ್ಟು ಒತ್ತಡದ ಮಧ್ಯೆಯೂ ರಶೀದ್ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ರಶೀದ್ 6 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕುಟುಂಬದ ಜೊತೆ ದೇಶದ ಬಗ್ಗೆ ಚಿಂತೆ ವ್ಯಕ್ತಪಡಿಸಿರುವ ರಶೀದ್, ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಳೆದ 5 ವರ್ಷಗಳಲ್ಲಿ ಕೇವಲ 25 ದಿನಗಳ ಕಾಲ ರಶೀದ್ ಮನೆಯಲ್ಲಿದ್ದರಂತೆ. ಕಳೆದ ಮೂರು ವರ್ಷಗಳಲ್ಲಿ ಅವರು ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಕುಟುಂಬದೊಂದಿಗೆ ಇರಲು ನನಗೆ ಸಾಕಷ್ಟು ಸಮಯ ಸಿಗಲಿಲ್ಲ. ಇದು ನನ್ನ ವೃತ್ತಿ ಜೀವನದ ಆರಂಭ. ಇದರಿಂದಾಗಿ ನಾನು ಕಷ್ಟಪಡಬೇಕಾಗಿದೆ ಎಂದು ಪಂದ್ಯಾವಳಿ ಆರಂಭಕ್ಕೂ ಮುನ್ನ ರಶೀದ್ ಹೇಳಿದ್ದರು.
ಸದ್ಯ ಅಫ್ಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟಿದ್ದು, ಈ ಪರಿಸ್ಥಿತಿಯಲ್ಲೂ, ರಶೀದ್ ಹಾಗೂ ಮೊಹಮ್ಮದ್ ನಬಿ, ಐಪಿಎಲ್ ಪಂದ್ಯಕ್ಕೆ ಹಾಜರಾಗಲಿದ್ದಾರೆ. ಐಪಿಎಲ್ ನಲ್ಲಿ ಹೈದರಾಬಾದ್ ಪರ ಆಡಲಿದ್ದಾರೆ.