alex Certify ಯಾವ ರಾಶಿಯವರಿಗೆ ‘ಶುಭ’ ನೀಡಲಿದೆ ಈ ಶುಕ್ರವಾರ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ರಾಶಿಯವರಿಗೆ ‘ಶುಭ’ ನೀಡಲಿದೆ ಈ ಶುಕ್ರವಾರ….?

ಮೇಷ: ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಕೊಂಚ ಕಿರಿಕಿರಿಯಾಗಲಿದೆ.

ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆ ಕಾಣಲಿದೆ. ಹೀಗಾಗಿ ಖರ್ಚುಗಳನ್ನ ನಿಯಂತ್ರಿಸದೇ ಬೇರೆ ವಿಧಿಯೇ ಇಲ್ಲ. ವ್ಯಾಪಾರಿಗಳಿಗೆ ಕೊಂಚ ಲಾಭವಿದೆ. ಪ್ರೇಮ ಜೀವನದಲ್ಲಿ ಯಾವುದೇ ಬದಲಾವಣೆ ಇಲ್ಲ.

ವೃಷಭ: ವಾತಾವರಣ ಸರಿ ಇಲ್ಲದ ಕಾರಣ ಆರೋಗ್ಯದ ಕಡೆ ಗಮನ ಇರಲಿ. ಆರೋಗ್ಯಕರ ಆಹಾರವನ್ನೇ ಸೇವನೆ ಮಾಡಿ.

ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದೀರ್ಘ ಪ್ರಯಾಣದ ನಿರೀಕ್ಷೆಯಿದೆ.

ಮಿಥುನ : ಹಿರಿಯರ ಆರೋಗ್ಯ ಸುಧಾರಿಸಲಿದೆ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ. ಸಂಗಾತಿಯ ಸಲಹೆಯನ್ನ ಕೇಳಿರಿ. ಅನೀರಿಕ್ಷಿತ ಅತಿಥಿ ಮನೆಗೆ ಆಗಮಿಸಬಹುದು. ವೃತ್ತಿ ಜೀವನ ಉತ್ತಮವಾಗಿ ಇರಲಿದೆ. ಕೆಲಸದತ್ತ ಇನ್ನಷ್ಟು ಶ್ರದ್ಧೆ ತೋರಿಸಿ.

ಕಟಕ: ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭ ಶುಕ್ರವಾರವೇ ಸರಿ. ಹೊಸ ಹೊಸ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಆಸ್ತಿ ವ್ಯಾಜ್ಯದ ಸಮಸ್ಯೆ ನಿವಾರಣೆಯಾಗಲಿದೆ. ಕೈಗೆ ಹಣ ಸೇರೋ ಖುಷಿ ಒಂದೆಡೆಯಾದರೆ ಬೆಲೆ ಬಾಳುವ ವಸ್ತು ಕಳೆದುಕೊಂಡು ಚಿಂತೆಗೀಡಾಗುವಿರಿ.

ಸಿಂಹ: ನಿಮ್ಮ ಪ್ರೇಮ ಜೀವನ ಸವಾಲು ಎನಿಸಬಹುದು. ಚಿಕ್ಕ ಚಿಕ್ಕ ವಿಷಯಕ್ಕೂ ಸಂಗಾತಿಯೊಡನೆ ಕಿರಿಕಿರಿ ಉಂಟಾಗಬಹುದು. ಔದ್ಯೋಗಿಕ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಆರ್ಥಿಕ ಜೀವನದಲ್ಲಿ ಚಿಕ್ಕಪುಟ್ಟ ಸವಾಲು ಎದುರಾಗುವ ಸಾಧ್ಯತೆ ಇದೆ.

ಕನ್ಯಾ: ನಿಮ್ಮ ಸಂವಹನಾ ಕೌಶಲ್ಯವೇ ಸಂದಿಗ್ದ ಪರಿಸ್ಥಿತಿಯಿಂದ ನಿಮ್ಮನ್ನ ಕಾಪಾಡಲಿದೆ. ಕುಲದೇವರನ್ನ ಆರಾಧಿಸಿ. ಉದ್ಯೋಗದಲ್ಲಿ ಮಿಶ್ರ ಫಲಿತಾಂಶ ನಿಮ್ಮದಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉದ್ಯಮಿಗಳಿಗೆ ದೂರ ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾಗಬಹುದು.

ತುಲಾ: ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸಹೋದ್ಯೋಗಿಗಳು ಬೆಂಬಲ ನೀಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ನಿಮ್ಮವರೇ ಎಂಬರ್ಥವಲ್ಲ. ಆದ್ದರಿಂದ ಕಚೇರಿ ಕೆಲಸದಲ್ಲಿ ಹುಷಾರಾಗಿರಿ. ಹಣ ಲಾಭದ ನಿರೀಕ್ಷೆ ಇದೆ. ಗಾಯತ್ರಿ ಮಂತ್ರ ಪಠಿಸಿ. ಸಂಗಾತಿ ಜೊತೆ ಪ್ರಯಾಣ ಮಾಡಲಿದ್ದೀರಿ.

ವೃಶ್ಚಿಕ: ಮನೆಯಲ್ಲಿನ ಶಾಂತಿಯುತ ವಾತಾವರಣ ನಿಮಗೆ ನೆಮ್ಮದಿ ನೀಡಲಿದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ವೃತ್ತಿ ಜೀವನದಲ್ಲಿ ಕೊಂಚ ಕಿರಿಕಿರಿ ಎದುರಾಗಲಿದೆ. ಕೋಪದ ಕೈಗೆ ಬುದ್ಧಿ ನೀಡಿ ಆತ್ಮೀಯರನ್ನ ಕಳೆದುಕೊಳ್ಳಬೇಡಿ.

ಧನು: ವಾಹನ ಓಡಿಸುವಾಗ ಎಚ್ಚರದಿಂದಿರಿ. ಉದ್ಯೋಗದಲ್ಲಿ ಬಡ್ತಿ ಇಲ್ಲವೇ ಸಂಬಳ ಏರಿಕೆಯ ಶುಭ ಸುದ್ಧಿಯನ್ನ ಕೇಳಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಇಲ್ಲಿಯವರೆಗೆ ಇದ್ದ ಕಿರಿಕಿರಿ ಇನ್ನಷ್ಟು ಹೆಚ್ಚಾಗಬಹುದು. ಸಂಗಾತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸುದ್ದಿ ಕಾದಿದೆ.

ಮಕರ: ಅನವಶ್ಯಕ ಖರ್ಚು ಮಾಡೋದನ್ನ ನಿಲ್ಲಿಸಿ. ಹಿರಿಯ ಅಧಿಕಾರಿಗಳು ಕೆಲಸದ ಮೇಲಿನ ನಿಮ್ಮ ಶ್ರದ್ಧೆಯನ್ನ ಕೊಂಡಾಡಲಿದ್ದಾರೆ. ಉದ್ಯೋಗಿಗಳಿಗೆ ಲಾಭದ ನಿರೀಕ್ಷೆಯಿದೆ. ಕಂಕಣ ಭಾಗ್ಯ ಕೂಡಿಬರಲಿದೆ. ಸಂಗಾತಿಯ ಸಲಹೆಯನ್ನ ಕೇಳಿ.

ಕುಂಭ: ನಾನು ಎಂದುಕೊಂಡಿದ್ದೇ ಸರಿ ಎಂಬ ಅಹಂ ಬೇಡ. ತಾಳ್ಮೆಯಿಂದ ಇದ್ದಲ್ಲಿ ಲಾಭವಿದೆ. ಬೇರೆಯವರ ಅಭಿಪ್ರಾಯಗಳನ್ನ ನಿರ್ಲಕ್ಷಿಸುವ ಬುದ್ಧಿಯನ್ನ ಬಿಟ್ಟುಬಿಡಿ. ಕೆಲಸದಲ್ಲಿನ ನಿಮ್ಮ ಪಾರದರ್ಶಕತೆ ಇತರರಿಗೆ ಮಾದರಿ ಎನಿಸಲಿದೆ.

ಮೀನ: ಉದ್ಯೋಗದ ನಿರೀಕ್ಷೆಯಲ್ಲಿ ಇದ್ದವರಿಗೆ ಶುಭ ಸುದ್ದಿ ಕಾದಿದೆ. ಜಾಣರಾಗಿದ್ದೀರಿ ಎಂದ ಮಾತ್ರಕ್ಕೆ ಎಡವಬಾರದು ಎಂದೇನಿಲ್ಲ. ಅವಿವಾಹಿತರಿಗೆ ಕಂಕಣ ಸಂಬಂಧ ಕೂಡಿ ಬರಬಹುದು. ವೆಂಕಟೇಶ್ವರನನ್ನ ಜಪಿಸಿ. ಸಂಕಟಗಳಿಂದ ಮುಕ್ತಿ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...