ಅದೊಂದು ಅಪರೂಪದ ಆನೆ ಮರಿ, ನೋಡ್ತಿದ್ರೆನೇ ಎಂಥವರಿಗೂ ಹೋಗಿ ಮುದ್ದು ಮಾಡ್ಬೇಕು ಅಂತ ಅನಿಸಿ ಬಿಡೋವಂತ ಆನೆ ಮರಿ ಅದು. ಈ ಆನೆಮರಿಯಲ್ಲಿ ಅಂಥದ್ದೇನು ವಿಶೇಷ ಇದೆ ಅಂತಿರಾ? ಆನೆ ಮರಿ ಬಿಳಿಬಣ್ಣವನ್ನ ಹೊಂದಿದೆ. ಪಶ್ಚಿಮ ಮ್ಯಾನ್ಮಾರ್‌ನಲ್ಲಿ ಹುಟ್ಟಿರೋ ಈ ಬಿಳಿ ಆನೆಮರಿಯನ್ನ ನೋಡಿ ಅಲ್ಲಿನ ಜನ ಇದನ್ನ ಮಂಗಳಕರ ಜೀವಿ ಎಂದು ಕರೆದಿದ್ದಾರೆ.
ಕಳೆದ ತಿಂಗಳು ಪಶ್ಚಿಮ ರಾಖೈನ್ ರಾಜ್ಯದಲ್ಲಿ ಜನಿಸಿದ ಈ ಆನೆಮರಿ ಸುಮಾರು 80 ಕಿಲೋಗ್ರಾಮ್‌ನಷ್ಟು ತೂಕ ಹೊಂದಿದೆ. ಮತ್ತು ಸುಮಾರು ಎರಡೂವರೆ ಅಡಿ ಎತ್ತರ ಹೊಂದಿದೆ ಎಂದು ಸ್ಥಳೀಯ ಮಾಧ್ಯಮ ಹೇಳಿದೆ.
ಈ ಬಿಳಿ ಆನೆ ಮರಿಗೆ ಜರ್ ನಾನ್ ಹ್ಲಾ ಎಂದು ಹೆಸರನ್ನ ಇಟ್ಟಿದ್ದಾರೆ. ಈ ಆನೆಮರಿಗೆ ತಾಯಿ ಆನೆಯ ವಯಸ್ಸು 33 ವರ್ಷ ಎಂದು ಹೇಳಲಾಗುತ್ತಿದೆ. ಇಂತಹ ಆನೆಮರಿಗಳು ಹುಟ್ಟುವುದೇ ಅಪರೂಪ. ಅದರಲ್ಲೂ ಬೌದ್ಧರೇ ಹೆಚ್ಚಿನ ಸಂಖ್ಯೆ ಇರುವ ಈ ರಾಷ್ಟ್ರದಲ್ಲಿ ಬಿಳಿ ಆನೆ ಹುಟ್ಟಿರುವುದು ಶುಭ ಸೂಚನೆಯಾಗಿದೆ ಅಂತ ಇಲ್ಲಿನ ಜನ ನಂಬಿದ್ದಾರೆ.