ಅತ್ಯಪರೂಪದ ಎರಡು ತಲೆ ನಾಗರ ಹಾವೊಂದನ್ನು ಉತ್ತರಾಖಂಡದ ಡೆಹರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ವಿಭಾಗದಲ್ಲಿ ರಕ್ಷಿಸಲಾಗಿದೆ.
ಇಲ್ಲಿನ ವಿಕಾಸ್ ನಗರದ ಕೈಗಾರಿಕಾ ಘಟಕವೊಂದರ ಆವರಣದಲ್ಲಿ ಕಂಡು ಬಂದ ಈ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಒಬ್ಬರಾದ ಆದಿಲ್ ಮಿರ್ಜಾ ರಕ್ಷಿಸಿದ್ದಾರೆ.
ಉತ್ತಮ ಲೈಂಗಿಕ ಜೀವನ ಬಯಸುವವರು ತಿನ್ನಿ ಇದೊಂದು ಆಹಾರ
15 ವರ್ಷಗಳಿಂದ ಹಾವು ಹಿಡಿಯುವ ಕೆಲಸದಲ್ಲಿ ಇರುವ ಆದಿಲ್, ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಎರಡು ತಲೆ ನಾಗರಹಾವನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ. ಡೆಹ್ರಾಡೂನ್ ಮೃಗಾಲಯದ ರಕ್ಷಣಾ ಕೇಂದ್ರಕ್ಕೆ ಹಾವನ್ನು ಕಳುಹಿಸಲಾಗಿದೆ.
ವಂಶವಾಹಿಗಳ ದೋಷದಿಂದ ಹೀಗೆ ಎರಡು ತಲೆ ಹಾವುಗಳು ಜನಿಸುವುದು ಎನ್ನುವ ತಜ್ಞರು ಇಂಥ ಜೀವಿಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದಿದ್ದಾರೆ.