alex Certify ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ

ಟೈಟಾನಿಕ್ ಹಡಗು ಮುಳುಗಿದ ಘಟನೆಯ ತನಿಖೆ ಮಾಡಲು ಬಳಸಲಾದ ಹಡಗಿನ ಕ್ರಾಸ್‌-ಸೆಕ್ಷನ್ ನಕಾಶೆಯೊಂದನ್ನು ಹರಾಜಿಗೆ ಇಡಲಾಗಿದೆ. ಬ್ರಿಟನ್‌ನ ಡೆವಿಜ಼ೆಸ್ ವಿಲ್ಟ್‌ಶೈರ್‌ ಎಂಬಲ್ಲಿ ಏಪ್ರಿಲ್ 22ರಂದು ಪುಸ್ತಕವನ್ನು ಹರಾಜಿಗೆ ಇಡಲಾಗಿದೆ.

1,500 ಜೀವಗಳನ್ನು ಬಲಿ ಪಡೆದ ಈ ದುರಂತದ ತನಿಖೆ ನಡೆಸಲು ಟೈಟಾನಿಕ್‌ ಹಡಗಿನ 10 ಮೀಟರ್‌ ಉದ್ದದ ನಕಾಶೆಯನ್ನು ಬಳಸಲಾಗಿತ್ತು. ಬ್ರಿಟೀಷ್ ವಾಣಿಜ್ಯ ಮಂಡಳಿ 36 ದಿನಗಳ ಮಟ್ಟಿಗೆ ನಡೆಸಿದ ಆಲಿಕೆಯಲ್ಲಿ 96 ಸಾಕ್ಷಿಗಳ ಹೇಳಿಕೆ ಪಡೆದು ಹಡಗಿನ ವಿವಿಧ ಆಯಾಮಗಳಿಂದ ಅದು ಮುಳುಗಿದ ಕುರಿತು ತನಿಖೆ ನಡೆಸಲಾಗಿತ್ತು.

ಈ ನಕಾಶೆಯ ಹರಾಜು ಇತಿಹಾಸದ ಆಸಕ್ತರನ್ನು ಆಕರ್ಷಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಈ ನಕಾಶೆಯು 2012ರಿಂದ ಬೆಲ್‌ಫಾಸ್ಟ್‌ನಲ್ಲಿ ಸಾರ್ವಜನಿಕ ಪ್ರದರ್ಶನದಲ್ಲಿದೆ. 2011ರಲ್ಲಿ ಖಾಸಗಿ ಕಲೆಕ್ಟರ್‌ ಒಬ್ಬರು 2.2 ಕೋಟಿ ರೂ.ಗಳಷ್ಟು ಮೊತ್ತಕ್ಕೆ ಈ ನಕಾಶೆಯನ್ನು ಪಡೆದುಕೊಂಡಿದ್ದರು. ಇದೀಗ ಹೊಸ ಹರಾಜಿನಲ್ಲಿ ಇದೇ ನಕಾಶೆಯು ಕನಿಷ್ಠ 2 ಕೋಟಿಗೆ ಹರಾಜಾಗುವ ಅಂದಾಜಿದೆ.

ಮುಳುಗಲು ಸಾಧ್ಯವೇ ಇಲ್ಲವೆಂದೇ ಪರಿಗಣಿತವಾಗಿದ್ದ ಟೈಟಾನಿಕ್‌ ಹಡಗು, 1912ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ ವೇಳೆ ಭಾರೀ ಗಾತ್ರದ ಮಂಜುಗಡ್ಡೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ತನ್ನ ಚೊಚ್ಚಲ ಯಾನದಲ್ಲೇ ಮುಳುಗಿಬಿಟ್ಟಿತ್ತು.

ಈ ದುರಂತದಿಂದ ಮನುಕುಲ ಸಾಕಷ್ಟು ಪಾಠಗಳನ್ನು ಕಲಿತಿದೆ. ಇಂದಿಗೂ ಸಹ ನೌಕಾಯಾನ ಕ್ಷೇತ್ರದಲ್ಲಿ ಸುರಕ್ಷತಾ ಕ್ರಮಗಳ ದೃಷ್ಟಿಯಿಂದ ಟೈಟಾನಿಕ್ ಮುಳುಗಡೆಯ ಪ್ರಕರಣದ ಅಧ್ಯಯನಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜೀವ ರಕ್ಷಕ ದೋಣಿಗಳು, ಸುಧಾರಿತ ಸಂಪರ್ಕ ಸಾಧನಗಳು, ಹಾಗೂ ನಿರಂತರ ಸುರಕ್ಷತಾಭ್ಯಾಸಗಳ ಅಗತ್ಯತೆಯನ್ನು ಟೈಟಾನಿಕ ದುರಂತ ಪದೇ ಪದೇ ಸಾರಿ ಹೇಳಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...