10 ವರ್ಷ ಬಾಲಕನೊಬ್ಬ ಶಾಶ್ವತ ಹಸಿವಿನಿಂದ ಬಳಲುತ್ತಿರುವ ಅಪರೂಪದ ಅನುವಂಶಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ.
ಪ್ರೇಡರ್-ವಿಲ್ಲಿ ಡಿಸಾರ್ಡರ್ (ಪಿಡಬ್ಲ್ಯೂಎಸ್) ಎಂಬ ಅಸಾಮಾನ್ಯ ಖಾಯಿಲೆಯನ್ನು ಎದುರಿಸುತ್ತಿರುವ ಸಿಂಗಾಪುರದ 10 ವರ್ಷದ ಮಗು ಡೇವಿಡ್ ಹಸಿವಿನಿಂದ ಬಳಲುತ್ತಿದ್ದಾನೆ. ಅನುವಂಶಿಕ ಖಾಯಿಲೆಯಿಂದ ಬಳಲುತ್ತಿರುವ ಡೇವಿಡ್ ಹೊಟ್ಟೆ ತುಂಬಾ ಊಟ ಮಾಡಿದ ನಂತರ ಕೂಡ ಸಂಪೂರ್ಣವಾಗಿ ತೃಪ್ತನಾಗುವುದಿಲ್ಲ.
ಆನುವಂಶಿಕ ಸಮಸ್ಯೆಯು ಡೇವಿಡ್ಗೆ ಹಸಿವು ಇಲ್ಲದಿರುವಂತೆ ಪ್ರಚೋದಿಸುತ್ತದೆ. ಹಸಿವಾಗುತ್ತಿದೆ ಎಂದು ಹೆಚ್ಚೆಚ್ಚು ಆಹಾರ ಸೇವಿಸಿದ್ರೆ, ತ್ವರಿತವಾಗಿ ತೂಕ ಏರುವ ಸಾಧ್ಯತೆಯಿದೆ. ಹೀಗಾಗಿ ಆತನ ಪೋಷಕರು ದಿನಚರಿಯಲ್ಲಿ ನಿರ್ದಿಷ್ಟ ಆಹಾರವನ್ನು ಮಾತ್ರ ಕೊಡುತ್ತಾರೆ.
ಪ್ರೇಡರ್-ವಿಲ್ಲಿ ಅಸ್ವಸ್ಥತೆಯು ಅರಿಜೋನಾದ ಹನ್ನಾ ವಿಲ್ಕಿನ್ಸನ್ ಎಂಬಾಕೆಗೂ ಇತ್ತು ಎಂದು ವರದಿ ಲಭಿಸಿದೆ. ಆಕೆ ಹೆಚ್ಚೆಚ್ಚು ಆಹಾರ ಸೇವಿಸಿದಂತೆ 160 ಕೆ.ಜಿ ತೂಕವನ್ನು ಗಳಿಸಿದ್ದಾಳೆ. ಇದರಿಂದ ಭೀತಿಗೊಂಡ ಆಕೆಯ ಪೋಷಕರು ನಿರ್ದಿಷ್ಟಪಡಿಸಿದ ಆಹಾರವನ್ನಷ್ಟೇ ನೀಡುತ್ತಾ ಬಂದಿದ್ದಾರೆ.
ಇನ್ನೊಂದೆಡೆ, ಬ್ರೆಜಿಲ್ನ ಮಿಸೇಲ್ ಕ್ಯಾಲ್ಡೊಗ್ನೊ ಅಬ್ರೂ ಅವರು ಪ್ರೇಡರ್-ವಿಲ್ಲಿ ಅಸ್ವಸ್ಥತೆಯ ಪರಿಣಾಮವಾಗಿ ಸಾಕಷ್ಟು ತೂಕವನ್ನು ಪಡೆದಿದ್ದಾರೆ. ಇದು ಅವರನ್ನು ಉಸಿರುಗಟ್ಟಿಸುವ ಅಪಾಯಕ್ಕೆ ಸಿಲುಕಿತು. ಮಿಸೇಲ್ ಮಗುವಾಗಿದ್ದಾಗಲೇ ಅತಿಯಾಗಿ ಆಹಾರ ಸೇವನೆ ಮಾಡುತ್ತಿದ್ದರು. ಇದರಿಂದಾಗಿ ಇತರ ಮಕ್ಕಳಿಗೆ ಹೋಲಿಸಿದ್ರೆ ಮೀಸೆಲ್ ತೂಕ 3 ಪಟ್ಟು ಹೆಚ್ಚಳವಾಗಿತ್ತು. ಆದರೆ, ಪ್ರೇಡರ್-ವಿಲ್ಲಿ ಎಂಬ ಅಪರೂಪದ ಖಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ.