ಪ್ರಕೃತಿ ತನ್ನ ಮಡಿಲಲ್ಲಿ ಅಸಂಖ್ಯಾತ ಅಮೂಲ್ಯ ರತ್ನಗಳನ್ನು ಬಚ್ಚಿಟ್ಟಿದೆ. ಮನುಷ್ಯನನ್ನ ಇದೇ ಪ್ರಕೃತಿ ತನ್ನ ವರ್ಚಸ್ಸಿನಿಂದ ಆಗಾಗ ಬೆರಗುಗೊಳಿಸುತ್ತಲೇ ಇರುತ್ತೆ. ಮಾನವನ ಚಟುವಟಿಕೆಗಳಿಂದ ಅಸಂಖ್ಯಾತ ಜೀವಿಗಳು ಭೂಮಿಯಿಂದ ನಿರ್ನಾಮವಾಗಿದೆ. ಕೆಲ ಜೀವಿಗಳು ಇನ್ನೂ ಅಸ್ತಿತ್ವದಲ್ಲಿವೆ. ಅವು ಅಪರೂಪಕ್ಕೊಮ್ಮೆ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತೆ. ಆಗ ಸಹಜವಾಗಿ ಎಲ್ಲರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ರೆಕಾರ್ಡ್ ಮಾಡಿಕೊಳ್ಳುವಾಗ ವ್ಯಕ್ತಿಯೊಬ್ಬರ ಕ್ಯಾಮೆರಾದಲ್ಲಿ ಕಪ್ಪು ಹುಲಿ ಮತ್ತು ಅದರ ಮರಿಯ ದೃಶ್ಯ ಸೆರೆಯಾಗಿದೆ.
ಕಪ್ಪು ಹುಲಿ ಅಪರೂಪದಲ್ಲೇ ಅಪರೂಪವಾಗಿರೋ ತಳಿಯ ಹುಲಿ. ಒಂದು ಕಾಲದಲ್ಲಿ ಕಾಡಿನಲ್ಲಿ ಈ ಹುಲಿಗಳದ್ದೇ ದರ್ಬಾರ್ ಆಗಿದ್ದರೂ ಈಗ ಹುಡುಕಿದರೂ ಒಂದೋ ಎರಡೋ ನೋಡಲು ಸಿಗುವುದು ಅಪರೂಪ. ಎಷ್ಟೋ ಜನರಿಗೆ ಕಪ್ಟು ಪಟ್ಟಿಯ ಹುಲಿಗಳು ಇರುತ್ತೆ ಅನ್ನೋದೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಕಪ್ಪು ಬಣ್ಣದ ತಾಯಿ ಹುಲಿ ಮತ್ತು ಅದರ ಮರಿ ನಡೆದುಕೊಂಡು ಬರ್ತಿರೋದು ಕಣ್ಣಿಗೆ ಬಿದ್ದರೆ ಹೇಗಿರುತ್ತೆ ಅಲ್ವಾ? ಡಬಲ್ ಧಮಾಕಾ ಇದ್ದ ಹಾಗೆ ಇರುತ್ತೆ. ಹೀಗೆ ಡಬಲ್ ಖುಷಿ ಅನುಭವಿಸೋದಕ್ಕೆ ಸಿಕ್ಕಿರೋದು ಐಎಫ್ಎಸ್ ಸುಸಾಂತ ನಂದಾ ಅವರಿಗೆ.
ಐಎಫ್ಎಸ್ ಸುಸಾಂತ ನಂದಾ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿ ಕಪ್ಪು ಹುಲಿ ನೋಡುವುದೇ ಅಪರೂಪ ಅಂತ ಬರೆದುಕೊಂಡಿರುವ ಅವರು, ಶೀರ್ಷಿಕೆಯಲ್ಲಿ ‘ಕಪ್ಪು ಹುಲಿ ಮತ್ತು ಅದರ ಮರಿ ಒಟ್ಟಿಗೆ ಇರುವ ವೀಡಿಯೋ , ನೀವು ಹಿಂದೆಂದೂ ನೋಡಿರಲಿಕ್ಕೆ ಸಾಧ್ಯವೇ ಇಲ್ಲ ‘ ಎಂದು ಬರೆದುಕೊಂಡಿದ್ದಾರೆ.
ಅಬುಂಡಿಸಂ ಬಗ್ಗೆ ಮಾತನಾಡುತ್ತಾ, ಐಎಫ್‌ಎಸ್ ಸುಶಾಂತ್ ನಂದಾ ಇದು ಒಂದು ರೀತಿಯ ಪಿಗ್ಮೆಂಟೇಶನ್ ಎಂದು ಬರೆದಿದ್ದಾರೆ. ಅಬುಂಡಿಸಂನಿಂದ ಬಳಲುತ್ತಿರುವ ಹುಲಿಗಳು ತಮ್ಮ ಚರ್ಮದ ಮೇಲೆ ದೊಡ್ಡ ಪಟ್ಟೆಗಳನ್ನು ಹೊಂದಿರುತ್ತವೆ, ಇದರಿಂದಾಗಿ ಆ ಹುಲಿ ಮೆಲಾನಿಸ್ಟಿಕ್ ಆಗಿ ಕಾಣುತ್ತದೆ. ಕೆಲವರು ಇದನ್ನು ಸೂಡೊಮೆಲನಿಸಂ ಎಂದೂ ಕರೆಯುತ್ತಾರೆ. ಸುಶಾಂತ್ ನಂದಾ ಅವರು ಒಡಿಶಾದ ಸಿಮ್ಲಿಪಾಲ್ ಟೈಗರ್ ರಿಸರ್ವ್‌ನಲ್ಲಿ ಕಂಡುಬರುವ ಕಪ್ಪು ಹುಲಿಯ ಈ ಕ್ಲಿಪ್ನ್ನ ಹಂಚಿಕೊಂಡಿದ್ದಾರೆ.
ಇಲ್ಲಿ ಹುಲಿ ಮರ ಹತ್ತಲು ಯತ್ನಿಸುತ್ತಿರುವುದು ಕಂಡುಬಂದಿದೆ. ಹವ್ಯಾಸಿ ಛಾಯಾಗ್ರಾಹಕರೊಬ್ಬರು ಫೆಬ್ರವರಿ 2022 ರಲ್ಲಿ ನಂದನ್‌ಕಾನನ್ ಝೂಲಾಜಿಕಲ್ ಪಾರ್ಕ್‌ನಲ್ಲಿ ಎರಡು ಕಪ್ಪು ಹುಲಿಗಳನ್ನು ಒಟ್ಟಿಗೆ ಛಾಯಾಚಿತ್ರ ಮಾಡಿದರು. 1993 ರಿಂದ ಒಡಿಶಾದ ಶಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಅಪರೂಪದ ಹುಲಿಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಈ ವೀಡಿಯೋ 22 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 1.1 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.