ಪ್ರಾಕೃತಿಕ ಕೌತುಕ ಆಗಿಂದಾಗ್ಗೆ ಬಹಿರಂಗ ಆಗುತ್ತಲೇ ಇರುತ್ತದೆ. ಇದೀಗ ಅಮೆರಿಕಾದ ಮೈನೆ ಕರಾವಳಿಯಲ್ಲಿ ‘ಹತ್ತಿ ಕ್ಯಾಂಡಿ’ ಬಣ್ಣದ ಚೇಳೇಡಿ (ಲಾಬ್ ಸ್ಟರ್) ಕಂಡುಬಂದಿದೆ.
ಸಾಮಾನ್ಯವಾಗಿ ಲಾಬ್ ಸ್ಟರ್ ಕೆಂಪು ಬಣ್ಣದಲ್ಲಿ ಇರುತ್ತವೆ. ಆದಾಗ್ಯೂ, ಅವು ವಿವಿಧ ಅಪರೂಪದ ಬಣ್ಣಗಳಲ್ಲೂ ಕಾಣಿಸುವುದಿದೆ. ಅಪರೂಪದ ಕಾಟನ್ ಕ್ಯಾಂಡಿ ಚೇಳೇಡಿಯನ್ನು ಕ್ಯಾಸ್ಕೋ ಕೊಲ್ಲಿಯಲ್ಲಿ ಕಾಪರ್ಸ್ಮಿತ್ ಎಂಬುವರು ಹಿಡಿದಿದ್ದಾರೆ. ಹಾಗೆಯೇ ಕಾಪರ್ಸ್ಮಿತ್ ಅವರು ತಮ್ಮ ಮೊಮ್ಮಗಳ ಗೌರವಾರ್ಥವಾಗಿ ಹ್ಯಾಡಿ ಎಂದು ಹೆಸರಿಸಿದ್ದಾರೆ. ಇದನ್ನು ಬೇಯಿಸುವುದಿಲ್ಲ ಅಥವಾ ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ʼಈರುಳ್ಳಿʼಯಲ್ಲಿದೆ ಕೂದಲಿನ ಸಮಸ್ಯೆಗೆ ಪರಿಹಾರ
ಚೇಳೇಡಿ ವಿವಿಧ ಬಣ್ಣಗಳ ಹಿಂದಿನ ಕಾರಣವೆಂದರೆ ಅವುಗಳು ಹೊಂದಿರುವ ವರ್ಣದ್ರವ್ಯವಂತೆ. ಇದನ್ನು ಅಸ್ಟಾಕ್ಸಾಂಥಿನ್ ಎಂದು ಸಹ ಕರೆಯಲಾಗುತ್ತದೆ.
ವಿಭಿನ್ನ ಬಣ್ಣಗಳಲ್ಲಿ ಅಲಂಕಾರಿಕವಾಗಿ ತೋರಿದರೂ, ಅವು ಅಪಾಯಕಾರಿಯಾಗಬಹುದು. ಹಾಗೆಯೇ ಸಂಭಾವ್ಯ ಎದುರಾಳಿಗಳಿಂದ ಮರೆಮಾಡಿಕೊಳ್ಳುವ ಬಣ್ಣದಲ್ಲಿ ಮರೆ ಮಾಚಿಕೊಳ್ಳುತ್ತವೆ.