
ಇಂಗ್ಲೆಂಡ್ ಮೃಗಾಲಯದ ಹಿಡನ್ ಕ್ಯಾಮೆರಾಗಳು ಹುಲಿಯೊಂದು ಎರಡು ಮರಿಗಳ ಜನ್ಮ ನೀಡಿರುವುದನ್ನು ಸೆರೆಹಿಡಿದಿವೆ. ಜನವರಿ 7ರಂದು ಮರಿಗಳು ಜನಿಸಿವೆ. ಸುಮಾತ್ರನ್ ತಳಿಯ ಈ ಹುಲಿ ಅಪರೂಪದ ತಳಿಯಾಗಿದೆ. ಒಂದು ತಿಂಗಳ ನಂತರ ಮೃಗಾಲಯವು ಇದರ ಬಗ್ಗೆ ಘೋಷಿಸಿದೆ. ಚೆಸ್ಟರ್ ಮೃಗಾಲಯದ ರಿಮೋಟ್ ಕ್ಯಾಮೆರಾ ತಂತ್ರಜ್ಞಾನದಲ್ಲಿ ಇದರ ಅಪರೂಪದ ದೃಶ್ಯ ಸೆರೆಯಾಗಿದೆ.
ಮರಿಗಳು ಗಂಡೋ, ಹೆಣ್ಣೋ ಎಂಬ ಬಗ್ಗೆ ಮೃಗಾಲಯ ಇದುವರೆಗೆ ತಿಳಿಸಿಲ್ಲ. ಇದು ಅಪರೂಪದ ತಳಿಯಾಗಿರುವ ಕಾರಣ ಹೆಚ್ಚಿನ ಮಾಹಿತಿಯನ್ನು ಇದುವರೆಗೆ ಬಹಿರಂಗಗೊಳಿಸಲಿಲ್ಲ. ತಾಯಿ ಮತ್ತು ಮಕ್ಕಳು ಕ್ಷೇಮವಾಗಿರುವುದಾಗಿ ಸಿಬ್ಬಂದಿ ಹೇಳಿದ್ದಾರೆ. ಏಪ್ರಿಲ್ನಲ್ಲಿ ಮರಿಗಳಿಗೆ ನಾಮಕರಣ ಮಾಡಲಾಗುವುದು. ಆಗ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.
ಮೃಗಾಲಯದ ಮಾಂಸಾಹಾರಿ ತಂಡದ ಮ್ಯಾನೇಜರ್ ಆಗಿರುವ ಡೇವ್ ಹಾಲ್, ಕೀಪರ್‌ಗಳು ಸಿಸಿ ಟಿವಿ ಕ್ಯಾಮೆರಾಗಳನ್ನು ಬಳಸಿಕೊಂಡು ಹುಲಿಯ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ ಎಂದಿದ್ದಾರೆ. ಸಿಸಿ ಟಿವಿಯ ಮೂಲಕವೇ ಮರಿಗಳನ್ನು ಹುಲಿ ಹೇಗೆ ಕಾಪಾಡುತ್ತಿದೆ ಎಂಬ ದೃಶ್ಯಗಳನ್ನು ಅವರು ವೈರಲ್ ಮಾಡಿದ್ದಾರೆ. ಯಾರ ಕಣ್ಣಿಗೂ ಮರಿಗಳು ಬೀಳದಂತೆ ಹೇಗೆ ಗುಹೆಯಲ್ಲಿ ರಕ್ಷಿಸಿ ಇಡುತ್ತವೆ ಎನ್ನುವುದನ್ನು ಇದರದಲ್ಲಿ ನೋಡಬಹುದು. ಇದೇ ಮೊದಲ ಬಾರಿಗೆ ಡ್ಯಾಶ್ ಎಂಬ ಹುಲಿ ಅಪ್ಪ ಆಗಿರುವುದಾಗಿ ಡೇವ್ ಹಾಲ್ ಹೇಳಿದ್ದಾರೆ.
https://www.youtube.com/watch?v=se33d_FNuRA&feature=youtu.be