ಬೆಂಗಳೂರು: ಜನವರಿ 25ರಂದು ಶನಿವಾರ ಅಪರೂಪದ ಖಗೋಳ ಕೌತುಕ ನಡೆಯಲಿದೆ. ಈ ವಿಸ್ಮಯ ವೀಕ್ಷಿಸಲು ವಿಜ್ಞಾನಿಗಳು ಸೇರಿದಂತೆ ಜನ ಕುತೂಹಲದಿಂದ ಕಾಯತೊಡಗಿದ್ದಾರೆ.
ಅಪರೂಪಗಳ ಗ್ರಹಗಳ ಸಂಯೋಗ ನಡೆಯಲಿದ್ದು, ಸೌರಮಂಡಲದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಒಂದೇ ರೇಖೆಯಲ್ಲಿ ಸೇರಲಿವೆ. ಸೂರ್ಯಸ್ತಾದ ನಂತರ ಶುಕ್ರವಾರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯುತ್ತವೆ. ಮಂಗಳ ಗ್ರಹ ಕೂಡ ಹೊಳಪನ್ನು ಸುರಿಸಲಿದೆ.
ಸೌರಮಂಡಲವು ಅನೇಕ ಗ್ರಹಗಳು ಸಾಲಾಗಿ ನಿಂತಂತೆ ಭಾಸವಾಗಲಿರುವ ಈ ರಚನೆ ಬಾಹ್ಯಾಕಾಶ ಆಸಕ್ತರಿಗೆ ಕೌತುಕವಾಗಿದೆ. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ನೇರ ಸಾಲಿನಲ್ಲಿ ಇರುವುದಿಲ್ಲ. ಬರಿಗಣ್ಣಿನಲ್ಲಿಯೂ ಈ ದೃಶ್ಯವನ್ನು ನೋಡಬಹುದಾಗಿದೆ.