ಕಳೆದೊಂದು ವಾರದಿಂದ ಕಾಣೆಯಾಗಿದ್ದ ದೆಹಲಿ ಮೂಲದ ರ‍್ಯಾಪರ್ ಆದಿತ್ಯ ತಿವಾರಿ ಅಲಿಯಾಸ್ ಎಂಸಿ ಕೋಡೆರನ್ನು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ಆದಿತ್ಯ ತಾಯಿ ದೀಪಾ ಧಿಂಗ್ರಾ ಅವರು ಪೊಲೀಸ್ ಠಾಣೆಯಲ್ಲಿ ಜೂನ್ 4ರಂದು 23 ವರ್ಷ ವಯಸ್ಸಿನ ತಮ್ಮ ಮಗ ಕಾಣೆಯಾಗಿದ್ದಾರೆ ಎಂದು ದೂರು ಕೊಟ್ಟಿದ್ದರು. ಮಾರನೇ ದಿನವೇ ಪ್ರಕರಣ ದಾಖಲಿಸಲಾಗಿತ್ತು.
ಇನ್‌ಸ್ಟಾಗ್ರಾಂನಲ್ಲಿ ತನ್ನ ಮಗ ಹಾಕಿದ್ದ ಪೋಸ್ಟ್ ಒಂದರಲ್ಲಿ ಆತ ಆತ್ಮಹತ್ಯೆ ಬಗ್ಗೆ ಚಿಂತಿಸುತ್ತಿದ್ದಾನೆ ಎನಿಸುತ್ತಿದೆ ಎಂದು ಆದಿತ್ಯ ತಾಯಿ ದೂರು ಕೊಡುವ ವೇಳೆ ಆತಂಕದಿಂದ ತಿಳಿಸಿದ್ದರು. ಆತ ಕಾಣೆಯಾದ ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿತ್ತು.
ಐವರು ಹೆಣ್ಣು ಮಕ್ಕಳೊಂದಿಗೆ ಸಾವಿಗೆ ಶರಣಾದ ತಾಯಿ
ಆದಿತ್ಯನ ಪತ್ತೆಗಾಗಿ ಪೊಲೀಸ್ ತಂಡವೊಂದನ್ನು ರಚಿಸಿ, ಜಬಲ್ಪುರದಲ್ಲಿರುವ ಆತನ ಸ್ನೇಹಿತನ ಮನೆಯಲ್ಲಿ ಪೊಲೀಸರು ಆತನನ್ನು ಕಂಡುಕೊಂಡಿದ್ದಾರೆ.
ತಿವಾರಿ ಕಾಣೆಯಾಗುವ ವಾರವೊಂದರ ಹಿಂದೆ, ಆರು ವರ್ಷಗಳ ಹಿಂದಿನ ಆತನ ಹಳೆ ರ‍್ಯಾಪ್ ವಿಡಿಯೋವೊಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲಿರುವ ಲಿರಿಕ್ಸ್‌ಗಳು ಸಮುದಾಯವೊಂದಕ್ಕೆ ಅಪಮಾನ ಮಾಡುತ್ತಿವೆ ಎಂಬ ಆಪಾದನೆ ಮೇಲೆ ಆದಿತ್ಯ ಬಹಳ ಟ್ರೋಲ್‌ಗೆ ಒಳಗಾಗಿದ್ದರು. ಆತನ ಕುಟುಂಬ ತಿಳಿಸುವ ಪ್ರಕಾರ, ಆತನಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಕೊಲೆ ಬೆದರಿಕೆಯೂ ಬಂದಿತ್ತು. ಈ ಬಗ್ಗೆ ಕ್ಷಮೆಯಾಚಿಸಿದರೂ ಸಹ ಆತನಿಗೆ ಬರುತ್ತಿದ್ದ ಕೊಲೆ ಬೆದರಿಕೆಗಳು ಮುಂದುವರೆಯುತ್ತಲೇ ಇದ್ದವು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಯುದ್ಧ ವಿಮಾನ ತರಬೇತಿಗೆ ಇಬ್ಬರು ಮಹಿಳೆಯರ ಆಯ್ಕೆ
ಇದಾದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದ ಆದಿತ್ಯ, “ನಿರಂತರ ನರಳಾಟಗಳಿಂದ ನನ್ನ ಬದುಕು ದುರ್ಬಲಗೊಂಡಿದೆ. ಸದ್ಯ ನಾನು ಯಮುನಾ ನದಿ ಮೇಲಿನ ಸೇತುವೆಯೊಂದರ ಮೇಲೆ ನಿಂತುಕೊಂಡಿದ್ದು, ಈ ಎಲ್ಲಾ ಘಟನೆಗಳಿಗೂ ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ, ಬದಲಾಗಿ ಎಲ್ಲದಕ್ಕೂ ನಾನೇ ಕಾರಣ. ನನ್ನ ಅಸ್ಥಿತ್ವದಿಂದಲೇ ಮುಕ್ತಿ ಸಿಕ್ಕಲ್ಲಿ, ಇಡೀ ದೇಶವೇ ಕಾಯುತ್ತಿರುವ ಶಿಕ್ಷೆಯೊಂದು ನನಗೆ ಆಗಬಹುದು” ಎಂದು ಹೇಳಿಕೊಂಡಿದ್ದರು.
ಈ ಪೋಸ್ಟ್ ಕಂಡ ಆತನ ಕುಟುಂಬ ಹಾಗೂ ಸ್ನೇಹಿತರು, ಆದಿತ್ಯನಿಗಾಗಿ ಯಮುನಾ ನದಿಯ ತೀರದಲ್ಲೆಲ್ಲಾ ಬಹಳ ಹುಡುಕಾಡಿದ್ದಾರೆ. ಕೊನೆಗೂ ಆದಿತ್ಯ ಬುಧವಾರ ಸಿಕ್ಕಿದ್ದಾರೆ.