ಬೆಂಗಳೂರು : ರ್ಯಾಪರ್ ಅಭಿನವ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಬಯಲಾಗಿದೆ. ಅಮೆಜಾನ್ ನಲ್ಲಿ ಅಭಿನವ್ ವಿಷ ಆರ್ಡರ್ ಮಾಡಿ 2 ದಿನ ಇಟ್ಟುಕೊಂಡಿದ್ದ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಪತ್ನಿ ಕಿರುಕುಳಕ್ಕೆ ಬೇಸತ್ತು ಖ್ಯಾತ ರ್ಯಾಪರ್ ಅಭಿನವ್ ಸಿಂಗ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಭಿನವ್ ಸಿಂಗ್ ಒಡಿಸ್ಸಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಪತ್ನಿ ಕಿರುಕುಳ ಸೇರಿ ಕೌಟುಂಬಿಕ ಸಮಸ್ಯೆಯಿಂದ ನೊಂದ ಅಭಿನವ್ ವಿಷ ಸೇರಿಸಿ ಸೂಸೈಡ್ ಮಾಡಿಕೊಂಡಿದ್ದರು. ಅಮೆಜಾನ್ ನಲ್ಲಿ ಅಭಿನವ್ ವಿಷ ಆರ್ಡರ್ ಮಾಡಿ 2 ದಿನ ಇಟ್ಟುಕೊಂಡಿದ್ದರು ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆನ್ ಲೈನ್ ನಲ್ಲಿ ವಿಷ ಸಲೀಸಾಗಿ ಸಿಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.