ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ಹೈಕೋರ್ಟ್ ರದ್ದು ಪಡಿಸಿದ ಘಟನೆ ನಡೆದಿದೆ.
ಅತ್ಯಾಚಾರ, ಪೋಕ್ಸೋ ಪ್ರಕರಣದ ಸಂತ್ರಸ್ತ ಯುವತಿ, ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಆರೋಪಿಯೊಂದಿಗೆ ವಿವಾಹವಾಗುವುದಾಗಿ ಹೇಳಿಕೆ ನೀಡಿದ್ದು, ಜೈಲಿನಲ್ಲಿರುವ ಆರೋಪಿಯೂ ತನ್ನನ್ನು ವಿವಾಹವಾಗಲು ಒಪ್ಪಿದ್ದಾಗಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಷರತ್ತಿನೊಂದಿಗೆ ಹೈಕೋರ್ಟ್ ಆರೋಪಿ ವಿರುದ್ಧದ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಸಂತ್ರಸ್ತ ಯುವತಿ ತಾನೀಗ ವಯಸ್ಕಳಾಗಿದ್ದು, ಆರೋಪಿಯೊಂದಿಗೆ ವಿವಾಹವಾಗುತ್ತೇನೆ. ಆರೋಪಿಯೂ ಮದುವೆಗೆ ಒಪ್ಪಿದ್ದಾನೆ. ಹಾಗಾಗಿ ಪ್ರಕರಣ ರದ್ದುಪಡಿಸುವಂತೆ ಅತ್ಯಾಚಾರ ಸಂತ್ರಸ್ತೆ ಮನವಿ ಮಾಡಿದ್ದಳು.
ಇನ್ನು ಜೈಲಿನಿಂದ ಕೋರ್ಟ್ ಗೆ ಹಾಜರು ಪಡಿಸಿದ್ದ ಆರೋಪಿಯೂ ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಅತ್ಯಾಚಾರ, ಪೋಕ್ಸೋ ಕೇಸ್ ರದ್ದುಗೊಳಿಸಿ, ಒಂದು ತಿಂಗಳೊಳಗಾಗಿ ವಿವಾಹವಾಗುವಂತೆ ಷರತ್ತು ವಿಧಿಸಿ ಮಹತ್ವದ ಆದೇಶ ನೀಡಿದೆ.
ಈ ಮೂಲಕ ಚಿಂತಾಮಣಿ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.