ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದ್ದು, ಹೈಗ್ರೌಂಡ್ಸ್ ಪೋಲಿಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.
ಆಂಧ್ರಪ್ರದೇಶದ ಲಕ್ಕಿ ಲಕ್ಷ್ಮಿರೆಡ್ಡಿ ಎಂಬುವನ ವಿರುದ್ಧ ದೂರು ನೀಡಲಾಗಿದೆ. ಅಕ್ಕನ ಹುಟ್ಟುಹಬ್ಬ ಇದೇ ಬಾ ಎಂದು ನಗರದ ಖಾಸಗಿ ಹೋಟೆಲ್ ಆಹ್ವಾನಿಸಿದ್ದ ಆರೋಪಿ ಬಳಿಕ ಡ್ರಿಂಕ್ಸ್ ನಲ್ಲಿ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾನೆ.
ನ್ಯಾಯ ಕೇಳಿದ ಯುವತಿಗೆ ಆರೋಪಿ ಬೆದರಿಸಿ ಜಾತಿ ನಿಂದನೆ ಮಾಡಿದ್ದಾನೆ. ನಂದು ರಾಯಲಸೀಮಾ. ನಿನ್ನನ್ನು ಉಡಾಯಿಸುತ್ತೇನೆ ಎಂದು ಬೆದರಿಸಿದ್ದಲ್ಲದೇ, ವಿಡಿಯೋ ತೋರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.