ಮಹಿಳೆಯರಿಗೆ ಗೌರವ, ಸನ್ಮಾನ ಸಿಗುವುದು ಮಹಿಳಾ ದಿನಾಚರಣೆ ದಿನ ಮಾತ್ರ. ಆ ದಿನ ಆಕೆ ಹಕ್ಕು, ಆಕೆ ಸಾಧನೆ ಬಗ್ಗೆ ಮಾತನಾಡಲಾಗುತ್ತದೆ. ಮಾತಿನಲ್ಲಿಯೇ ಮನೆ ಕಟ್ಟುವ ಜನರು ಮಹಿಳೆಯರಿಗೆ ನಿಜವಾದ ಗೌರವ, ಹಕ್ಕನ್ನು ನೀಡುವುದಿಲ್ಲ. ತನಗಾಗಿ ಮಹಿಳೆ ಸ್ವಂತ ಹೋರಾಟ ನಡೆಸಬೇಕು. ಇದಕ್ಕೆ 1994ರಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಾಕ್ಷಿ. ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಮಹಿಳೆಯೊಬ್ಬರು 26 ವರ್ಷಗಳ ನಂತರ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದಾರೆ.
1994ರಲ್ಲಿ ಆಕೆ ಮೇಲೆ ಅತ್ಯಾಚಾರ ನಡೆದಿತ್ತು. ಆದ್ರೆ 2021ರಲ್ಲಿ ಎಫ್ಐಆರ್ ದಾಖಲಾಗಿದೆ. ಅದೂ ಆರು ತಿಂಗಳು ಅಲೆದ ನಂತ್ರ ಆಕೆ ದೂರು ದಾಖಲಿಸಿದ್ದಾಳೆ. ಆಕೆ ಎಫ್ಐಆರ್ ದಾಖಲಿಸದಿರಲು ಆಕೆ ಮಗನೇ ಮುಖ್ಯ ಕಾರಣ. ಇದು 1994ರ ಘಟನೆ. ಪೀಡಿತೆ 12 ವರ್ಷದವಳಿದ್ದಾಗ, ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಸಹೋದರರಾದ ನಾಕಿ ಹಸನ್ ಮತ್ತು ಗುಡ್ಡು ಅತ್ಯಾಚಾರವೆಸಗಿದ್ದರಂತೆ. ಸತತ ಒಂದು ವರ್ಷಗಳ ಕಾಲ ಪೀಡಿತೆ ಮೇಲೆ ಅತ್ಯಾಚಾರವೆಸಗಿದ್ದರಂತೆ. 13ನೇ ವಯಸ್ಸಿನಲ್ಲಿ ಆಕೆ ಗರ್ಭ ಧರಿಸಿದ್ದಳಂತೆ. ಮಗುವಿಗೆ ಜನ್ಮ ನೀಡಿದ ಪೀಡಿತೆ ಸಮಾಜದ ಭಯಕ್ಕೆ ಮಗುವನ್ನು ದತ್ತು ನೀಡಿದ್ದಳಂತೆ.
20ನೇ ವರ್ಷದಲ್ಲಿ ಮಹಿಳೆಗೆ ಮದುವೆಯಾಯ್ತಂತೆ. ಆದ್ರೆ ಕೆಲ ವರ್ಷದಲ್ಲಿ ಈ ಸತ್ಯ ಗೊತ್ತಾಗ್ತಿದ್ದಂತೆ ಪತಿ ಆಕೆಗೆ ವಿಚ್ಛೇದನ ನೀಡಿದ್ದನಂತೆ. ಈ ವೇಳೆಗೆ ಆಕೆ ದತ್ತು ನೀಡಿದ್ದ ಮಗ ದೊಡ್ಡವನಾಗಿದ್ದ. ದತ್ತು ಪಡೆದಿದ್ದವರು ಮಗನನ್ನು ವಾಪಸ್ ನೀಡಿದ್ದರಂತೆ. ಮಗ ದೊಡ್ಡವನಾಗ್ತಿದ್ದಂತೆ ತಂದೆ ಯಾರು ಎಂಬ ಪ್ರಶ್ನೆ ಶುರು ಮಾಡಿದ್ದನಂತೆ. ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಪತಿ ಯಾರೆಂಬುದನ್ನು ಹೇಳಿರಲಿಲ್ಲವಂತೆ. ಆದ್ರೆ ಹಿಂದಿನ ವರ್ಷ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಿದ್ದಳಂತೆ. ತಾಯಿಗಾದ ಅನ್ಯಾಯದ ವಿರುದ್ಧ ಹೋರಾಡಲು ಮಗ ಮುಂದಾಗಿದ್ದಾನೆ.