
ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಉಪನ್ಯಾಸಕ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆರೋಪಿ ಉಪನ್ಯಾಸಕನಿಗೆ ಹೈಕೋರ್ಟ್ ಜಾಮೀನು ರದ್ದುಪಡಿಸಿದೆ.
2018 ರಲ್ಲಿ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅತ್ಯಾಚಾರವೆಸಗಿ ನಗ್ನ ಫೋಟೋ ಸೆರೆಹಿಡಿದ ಆರೋಪ ಕೇಳಿಬಂದಿತ್ತು. 2021 ರಲ್ಲಿ ಸಂತ್ರಸ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಬಂಧನವಾದ ಎರಡೇ ದಿನಕ್ಕೆ ಆರೋಪಿಗೆ ಜಾಮೀನು ದೊರೆತಿತ್ತು. ದಕ್ಷಿಣಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಉಪನ್ಯಾಸಕನಿಗೆ ಜಾಮೀನು ನೀಡಿತ್ತು.
ಜಾಮೀನು ರದ್ದು ಕೋರಿ ದೂರುದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿತನಿಗೆ ಜಾಮೀನು ರದ್ದುಪಡಿಸಿದೆ. ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಜಾಮೀನುರದ್ದುಗೊಳಿಸಿ ತೀರ್ಪು ನೀಡಿದ್ದಾರೆ.