ಜಮ್ಮು ಮತ್ತು ಕಾಶ್ಮೀರದ ವಾಯುಪಡೆ ನಿಲ್ದಾಣದ ವಿಂಗ್ ಕಮಾಂಡರ್ ವಿರುದ್ಧ ಅತ್ಯಾಚಾರ, ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಭಾರತೀಯ ವಾಯುಪಡೆಯ(ಐಎಎಫ್) ಮಹಿಳಾ ಫ್ಲೈಯಿಂಗ್ ಆಫೀಸರ್ ದೂರು ನೀಡಿದ್ದಾರೆ.
ಶ್ರೀನಗರದ ವಾಯುಪಡೆಯ ವಿಂಗ್ ಕಮಾಂಡರ್ ಅತ್ಯಾಚಾರ, ಮಾನಸಿಕ ಕಿರುಕುಳ ಮತ್ತು ನಿರಂತರ ಹಿಂಬಾಲಿಸಿದ್ದಾಗಿ ಮಹಿಳಾ ಫ್ಲೈಯಿಂಗ್ ಆಫೀಸರ್ ದೂರು ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಥಮ ಮಾಹಿತಿ ವರದಿ(ಎಫ್ಐಆರ್) ದಾಖಲಿಸಿದ್ದಾರೆ.
ಐಎಎಫ್ ಮಹಿಳಾ ಫ್ಲೈಯಿಂಗ್ ಆಫೀಸರ್ ಆರೋಪ
ಡಿಸೆಂಬರ್ 31, 2023 ರಂದು ಶ್ರೀನಗರದ ವಾಯುಪಡೆ ನಿಲ್ದಾಣದ ಅಧಿಕಾರಿಗಳ ಮೆಸ್ನಲ್ಲಿ ನಡೆದ ಹೊಸ ವರ್ಷದ ಪಾರ್ಟಿಯ ನಂತರ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಲಾಯಿತು ಎಂದು ಮಹಿಳಾ ಅಧಿಕಾರಿ ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
ಹೊಸ ವರ್ಷದ ಉಡುಗೊರೆಯನ್ನು ಸ್ವೀಕರಿಸಲು ಕೋಣೆಗೆ ಬರಲು ವಿಂಗ್ ಕಮಾಂಡರ್ ಹೇಳಿದ ನಂತರ ಜನವರಿ 1 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಕೋಣೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
“ನಾನು ಯಾವುದನ್ನೂ ಸ್ವೀಕರಿಸಿಲ್ಲ ಎಂದು ಹೇಳಿದೆ. ಅವರು ನನ್ನನ್ನು ತಮ್ಮ ಕೋಣೆಗೆ ಬರಲು ಕೇಳಿದರು, ಅಲ್ಲಿ ಅವರು ಎಲ್ಲಾ ಉಡುಗೊರೆಗಳನ್ನು ಇಟ್ಟಿದ್ದಾರೆ. ನಾನು ಅವರೊಂದಿಗೆ ಕೋಣೆಗೆ ಹೋದೆ. ಅವರು ತಮ್ಮ ಕೋಣೆಯನ್ನು ನನಗೆ ತೋರಿಸಿದರು ಮತ್ತು ಅಮ್ಮ ಮತ್ತು ಮಕ್ಕಳು ಎಲ್ಲಿದ್ದಾರೆ ಎಂದು ನಾನು ಅವರನ್ನು ಕೇಳಿದೆ. ಅವರು ಬೇರೆ ವಸತಿಗೃಹದಲ್ಲಿದ್ದಾರೆ ಎಂದು ಅವರು ಉತ್ತರಿಸಿದರು” ಎಂದು ಅವರು ಹೇಳಿದ್ದಾರೆ.
ನಂತರ ವಿಂಗ್ ಕಮಾಂಡರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅವರು ಹೇಳಿದರು. “ನಾನು ಅದನ್ನು ಮಾಡುವುದನ್ನು ನಿಲ್ಲಿಸುವಂತೆ ಪದೇ ಪದೇ ಕೇಳಿದೆ ಮತ್ತು ಅದನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪ್ರತಿರೋಧಿಸಲು ಪ್ರಯತ್ನಿಸಿದೆ.
ರಾತ್ರಿ ಅಧಿಕಾರಿಗಳ ಮೆಸ್ನಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ನಡೆದಿದೆ. ವಿಂಗ್ ಕಮಾಂಡರ್ ತನ್ನ ಕೋಣೆಯಲ್ಲಿ ಉಡುಗೊರೆ ಸಂಗ್ರಹಿಸಲು ಹೇಳಿ ನಂತರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.