ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಸಾಮುದ್ರ ಗ್ರಾಮದ 24 ವರ್ಷದ ನಾಗರಾಜ ಬಂಧಿತ ಆರೋಪಿ ಎಂದು ಹೇಳಲಾಗಿದೆ.
ಕೃತ್ಯ ನಡೆದ ಮರು ದಿನವೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತನ ಕೃತ್ಯ ಖಚಿತವಾದ ನಂತರ ಬಂಧಿಸಿದ್ದಾರೆ. ಬಾಲಕಿಯ ಮನೆ ಪಕ್ಕದಲ್ಲೇ ವಾಸವಾಗಿದ್ದ ನಾಗರಾಜ ಆಕೆಯ ಚಲನವಲನ ಗಮನಿಸಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಮೆಕ್ಕೆಜೋಳದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆರೋಪಿಯ ಕೃತ್ಯದ ಬಗ್ಗೆ ಗ್ರಾಮದ ಕೆಲವರಿಗೆ ಮಾಹಿತಿ ಇದ್ದರೂ ಕೂಡ ಪೊಲೀಸರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ.
ಸ್ಥಳದಲ್ಲಿದ್ದ ಚಪ್ಪಲಿ ಮತ್ತು ಎಮ್ಮೆ ಕಟ್ಟಿರುವುದನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿ ಕೃತ್ಯವೆಸಗಿದ ನಂತರವೂ ತನ್ನ ಮನೆಯಲ್ಲೇ ಇದ್ದ. ಕೆಸರಾಗಿದ್ದ ಬಟ್ಟೆ ಬದಲಿಸಿ ಬೇರೆ ಬಟ್ಟೆ ಧರಿಸಿ ಎಮ್ಮೆ ಮೇಯಿಸಲು ಹೋಗಿದ್ದ. ಕಳೆದ ಒಂದು ವರ್ಷದಿಂದ ಫೋನ್ ಬಳಕೆ ನಿಲ್ಲಿಸಿ ಸ್ನೇಹಿತರ ಫೋನ್ ನಲ್ಲಿ ಅಶ್ಲೀಲ ವೀಡಿಯೋ ವೀಕ್ಷಿಸುತ್ತಿದ್ದ. ಈತನೇ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.