ಕಲಬುರಗಿ: ಅತ್ಯಾಚಾರದಿಂದ ಎಂಟು ತಿಂಗಳ ಗರ್ಭಿಣಿಯಾಗಿದ್ದ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಖಂಡಿಸಿ ಬಾಲಕಿಯ ಸಂಬಂಧಿಕರು, ಬಡಾವಣೆಯ ನಿವಾಸಿಗಳು, ದಲಿತ ಸಂಘಟನೆಯ ಮುಖಂಡರು ಕಲಬುರಗಿ ಕೆಬಿಎನ್ ಆಸ್ಪತ್ರೆ ಮುಂದೆ ಮುಖ್ಯ ರಸ್ತೆಯಲ್ಲಿ ಕೆಲಕಾಲ ಧರಣಿ ನಡೆಸಿದ್ದಾರೆ.
ತಂದೆ ಇಲ್ಲದ ಬಾಲಕಿಯನ್ನು ಹೊಟ್ಟೆ ನೋವು ಕಾರಣ ತಾಯಿ ಗುರುವಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿ ಆಗಿರುವುದನ್ನು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಮೃತಪಟ್ಟಿದ್ದಾಳೆ.
ಅತ್ಯಾಚಾರ ಎಸಗಿದ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಭಟನೆ ನಡೆಸಲಾಗಿದೆ. ಮಿಲ್ಲತ್ ನಗರ ನಿವಾಸಿ ವಿವಾಹಿತ ಮಿರ್ಜಾ ಸರ್ಫಾರಾಜ್ ತನ್ನ ಮಗಳನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.