
ಕಲಬುರಗಿ: ಕಾಮುಕ ಬಾಲಕರು ಅಟ್ಟಹಾಸ ಮೆರೆದಿದ್ದು, ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜನವರಿ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗುಲ್ಬರ್ಗ ವಿವಿ ಪೊಲೀಸ್ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಕಲಬುರಗಿ ನಗರದ ಸುಣ್ಣದ ಬಟ್ಟಿ ಪ್ರದೇಶದ ಅರಾಫತ್ ಕಾಲೋನಿಯ 13 ವರ್ಷದ ಬುದ್ಧಿಮಾಂದ್ಯ ಬಾಲಕಿ ಮೇಲೆ ನಾಲ್ಕೈದು ಮಂದಿ ಹುಡುಗರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
15 ರಿಂದ 16 ವರ್ಷದ ಅಪ್ರಾಪ್ತರು ಇಂತಹ ಕೃತ್ಯವೆಸಗಿದ್ದು. ಬುದ್ಧಿಮಾಂದ್ಯ ಬಾಲಕಿಯಾದ ಕಾರಣ ವಿಷಯ ತಡವಾಗಿ ಗೊತ್ತಾಗಿದೆ ಎಂದು ಪೋಷಕರು ದೂರು ನೀಡಿದ್ದಾರೆ. ಅರಾಫತ್ ಕಾಲೋನಿಯವರೇ ಆಗಿರುವ ಬಾಲಕರು ಇದೇ ಪ್ರದೇಶದಲ್ಲಿ ವಾಸವಾಗಿದ್ದ ಬಾಲಕಿಗೆ ಪರಿಚಯವಿದ್ದಾರೆ.