ಬೆಂಗಳೂರು: 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ FTNC ಮೂರನೇ ಕೋರ್ಟ್ ತೀರ್ಪು ನೀಡಿದೆ.
ಹನುಮಂತನಗರದ ಸುಂಕೇನಹಳ್ಳಿಯ ರಾಘವೇಂದ್ರ ಜೈಲು ಶಿಕ್ಷೆಗೆ ಒಳಗಾದ ಆರೋಪಿ. 202ರಲ್ಲಿ ಕೆಲಸ ಹುಡುಕಿಕೊಂಡು ಬಂದು ಸಂತ್ರಸ್ತ ಬಾಲಕಿ ಪೋಷಕರ ಬಳಿ ಆಶ್ರಯ ಪಡೆದಿದ್ದ. ಮನೆಯಲ್ಲಿ ವಿದ್ಯಾರ್ಥಿನಿ ಒಂಟಿಯಾಗಿರುವಾಗ ದೈಹಿಕ ಸಂಪರ್ಕ ಬೆಳೆಸಿದ್ದ.
2022ರ ನವೆಂಬರ್ ನಲ್ಲಿ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ವಿಚಾರ ತಿಳಿದ ಹನುಮಂತನಗರ ಪೊಲೀಸ್ ಠಾಣೆಯ ಅಂದಿನ ಇನ್ಸ್ ಪೆಕ್ಟರ್ ಬಿ.ಎನ್. ಸಂದೀಪ್ ಕುಮಾರ್ ನೇತೃತ್ವದ ತಂಡ ಆರೋಪಿ ಬಂಧಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ಅವರು ಸಂತ್ರಸ್ತೆ ಪರ ವಾದ ಮಂಡಿಸಿದ್ದರು. ರಾಘವೇಂದ್ರ ಅಪಾರಾಧಿ ಎಂದು ನ್ಯಾಯಾಧೀಶರಾದ ಇಷ್ರತ್ ಜಹಾನ್ ಘೋಷಿಸಿ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರಕ್ಕೆ ಸೂಚಿಸಲಾಗಿದೆ.