ಬೆಂಗಳೂರು: 13 ವರ್ಷದ ಪುತ್ರಿ ಮೇಲೆ ತಂದೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿ ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಬೆಂಗಳೂರಿನ ಎರಡನೇ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ. 2015 ರಲ್ಲಿ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮಕ್ಕಳ ಸಹಾಯವಾಣಿಯಿಂದ ಬಾಲಕಿ ರಕ್ಷಣೆ ಮಾಡಲಾಗಿತ್ತು. ಈವರೆಗೂ NGO ಒಂದರಲ್ಲಿ ಬಾಲಕಿ ಆಶ್ರಯ ಪಡೆದಿದ್ದಳು.
ಐಪಿಸಿ, ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಸಜೆ ವಿಧಿಸಿ ಎಫ್.ಟಿ.ಸಿ. 2 ರ ವಿಶೇಷ ನ್ಯಾಯಾಧೀಶ ಎ.ಜಿ. ಗಂಗಾಧರ ಅವರು ತೀರ್ಪು ನೀಡಿದ್ದಾರೆ. ಸಂತ್ರಸ್ತೆಯ ಪರವಾಗಿ ಪಿಪಿ ಕೆ.ವಿ. ಅಶ್ವತ್ಥನಾರಾಯಣ ವಾದ ಮಂಡಿಸಿದ್ದರು. ಸಂತ್ರಸ್ಥ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.