
ಬೆಂಗಳೂರು: ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕಾರಣದಲ್ಲಿ ಸೈಯದ್ ಖಾಜಾ ಎಂಬುವನಿಗೆ 20 ವರ್ಷ ಕಠಿಣ ಶಿಕ್ಷೆ, 12,500 ರೂ. ದಂಡ ವಿಧಿಸಲಾಗಿದೆ.
ಬೆಂಗಳೂರಿನ ತ್ವರಿತಗತಿ ಕೋರ್ಟ್ ನ್ಯಾ. ಎ.ಜಿ. ಗಂಗಾಧರ ಅವರು ಆದೇಶ ಹೊರಡಿಸಿದ್ದಾರೆ. 2019 ರಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಯುವತಿಯನ್ನು ಅಪಹರಿಸಿ ಸೈಯದ್ ಖಾಜಾ ಅತ್ಯಾಚಾರ ಎಸಗಿದ್ದ. ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು, ಈತನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪಿಪಿ ಕೆ.ವಿ. ಅಶ್ವತ್ಥ್ ನಾರಾಯಣ ವಾದ ಮಂಡಿಸಿದ್ದರು.