
ಕೋಲ್ಕತ್ತಾ: ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನನ್ನು ಪಶ್ಚಿಮ ಬಂಗಾಳ ಪೊಲಿಸರು ಬಂಧಿಸಿರುವ ಘಟನೆ ನಡೆದಿದೆ.
ನಾರಾಯಣ ಮಿತ್ರಾ ಬಂಧಿತ ಆರೋಪಿ. ಯುವತಿ ಕುಟುಂಬದವರು ನೀಡಿದ ದೂರಿನ ಹಿನ್ನಲೆಯಲ್ಲಿ ನಾರಾಯಣ ಮಿತ್ರನನ್ನು ಬಂಧಿಸಲಾಗಿದೆ.
ನಾರಾಯಣ ಮಿತ್ರ ಬಂಕೂರಿನ ತನ್ನ ಮನೆಯಲ್ಲಿ ಯುವತಿ ಮೇಲೆ 2-3 ದಿನಗಳ ಕಾಲ ಅತ್ಯಾಚಾರವೆಸಗಿದ್ದ. ಸಂತ್ರಸ್ತೆ ಹಾಗೂ ಆಕೆ ಕುಟುಂಬದವರು ನೀಡಿರುವ ದೂರಿನ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ನಾರಾಯಣ ಮಿತ್ರ ಬಂಧನವಾಗುತ್ತಿದಂತೆ ತೃಣಮೂಲ ಕಾಂಗ್ರೆಸ್ ತನ್ನ ಟ್ರೇಡ್ ಯುನಿಯನ್ ನಿಂದ ಆತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.