ಕಲಬುರಗಿ : ಅತ್ಯಾಚಾರ ಪ್ರಕರಣದಲ್ಲಿ ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾ ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕಲಬುರಗಿ 2 ನೇ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಹವಾ ಮಲ್ಲಿನಾಥ ಮುತ್ಯಾ ಅವರ ಸಂಬಂಧಿ ಪ್ರಕಾಶ್ ಮೇಲೆ ಅಟ್ರಾಸಿಟಿ ಮತ್ತು ಅತ್ಯಾಚಾರ ಪ್ರಕರಣವಿದ್ದು, ಹವಾ ಮಲ್ಲಿನಾಥ ಮುತ್ಯಾ ವಿರುದ್ಧವೂ ಕುಮ್ಮಕ್ಕು ಆರೋಪ ಹಿನ್ನೆಲೆ 498/A, 506,109, 34 ಅಡಿ 2018ರಲ್ಲಿ ಕಲಬುರಗಿಯ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕಲಬುರಗಿಯ ಎರಡನೇ ಹೆಚ್ಚುವರಿ ನ್ಯಾಯಲಯದಿಂದ ವಾರೆಂಟ್ ಜಾರಿಗೊಳಿಸಿತ್ತು. ನೋಟಿಸ್ ಜಾರಿಯಾದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಹವಾ ಮಲ್ಲಿನಾಥ್ ಮುತ್ಯಾನನ್ನು ಸೋಮವಾರ ಕೋರ್ಟ್ಗೆ ಹಾಜರಾದ ಸಂದರ್ಭದಲ್ಲಿ ಬಂಧಿಸಲಾಗಿದೆ . ಮಲ್ಲಿನಾಥ್ ಮುತ್ಯಾನನ್ನು ವಶಕ್ಕೆ ಪಡೆದ ನ್ಯಾಯಾಲಯ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ .