alex Certify ಬೆಂಗಳೂರಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಬಲವಂತವಾಗಿ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ, ರಾತ್ರಿಯೆಲ್ಲಾ ಪೊದೆಯಲ್ಲಿದ್ದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಬಲವಂತವಾಗಿ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ, ರಾತ್ರಿಯೆಲ್ಲಾ ಪೊದೆಯಲ್ಲಿದ್ದ ಯುವತಿ

ಬೆಂಗಳೂರು: ಡ್ರಾಪ್ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಖಿಲೇಶ್ ಮತ್ತು ದೀಪು ಬಂಧಿತ ಆರೋಪಿಗಳು. ಆಗಸ್ಟ್ 31 ರಂದು 25 ವರ್ಷದ ಯುವತಿ ಈಜಿಪುರ ಸಮೀಪ ಇರುವ ತಮ್ಮ ಸೈಟ್ ನೋಡಿಕೊಂಡು ವಾಪಸ್ ಬರುವಾಗ ಇಬ್ಬರು ಯುವಕರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬರುತ್ತಿದ್ದಂತೆ ಎರಡು ಬೈಕ್ ನಲ್ಲಿ ಬಂದಿದ್ದ ಅಖಿಲೇಶ್ ಮತ್ತು ದೀಪು ನಮ್ಮ ಏರಿಯಾದವರಲ್ಲವೇ ಡ್ರಾಪ್ ಕೊಡುತ್ತೇವೆ ಬನ್ನಿ ಎಂದು ಬಲವಂತವಾಗಿಸಿ ಬೈಕ್ ಹತ್ತಿಸಿಕೊಂಡಿದ್ದಾರೆ.

ಯುವತಿಯನ್ನು ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ. ರಾತ್ರಿಯಿಡಿ ಪೊದೆಯಲ್ಲಿ ಅವಿತುಕೊಂಡಿದ್ದ ಯುವತಿ ಬೆಳಗಿನ ಜಾವ ಸಮೀಪದ ಮನೆಯವರ ಸಹಾಯದಿಂದ ಬಟ್ಟೆ ಧರಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...