ಬೆಂಗಳೂರು: ತೃತೀಯಲಿಂಗಿಯೊಬ್ಬ ಒಂಟಿಯಾಗಿದ್ದ ವೃದ್ಧೆ ಮೇಲೆ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಜೂಲಿ ಇಂತಹ ಕೃತ್ಯವೆಸಗಿದ ಆರೋಪಿ ಎಂದು ಹೇಳಲಾಗಿದೆ. ತನ್ನ ಪರಿಚಯದವರೇ ಆಗಿದ್ದ ಕೋರಮಂಗಲ 6ನೇ ಬ್ಲಾಕ್ ನಿವಾಸಿ ವೃದ್ಧೆಯ ಮನೆಗೆ ತೆರಳಿದ್ದ ಆರೋಪಿ ಜನವರಿ 2 ರಂದು ಸಂಜೆ 4 ಗಂಟೆಗೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ನಂತರ ವೃದ್ಧೆ ಸಂಬಂಧಿಕರ ಬಳಿ ಮಾಹಿತಿ ನೀಡಿದ್ದು, ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧೆಯಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.