ಕಠ್ಮಂಡು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಹಲವಾರು ಅನುಯಾಯಿಗಳ ಕಣ್ಮರೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ‘ಬುದ್ಧ ಬಾಯ್’ ಎಂದು ಕರೆಯಲ್ಪಡುವ ರಾಮ್ ಬಹದ್ದೂರ್ ಬಾಮ್ಜಾನ್ ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಭಕ್ತರಿಂದ ‘ಬುದ್ಧ ಬಾಯ್’ ಎಂದು ಕರೆಯಲ್ಪಡುವ ರಾಮ್ ಬಹದ್ದೂರ್ ಬೊಮ್ಜಾನ್ ಹದಿಹರೆಯದವನಾಗಿದ್ದಾಗ ಆತ ನೀರು, ಆಹಾರ ಅಥವಾ ನಿದ್ರೆ ಇಲ್ಲದೆ ತಿಂಗಳುಗಟ್ಟಲೆ ಚಲನರಹಿತನಾಗಿ ಧ್ಯಾನ ಮಾಡುವ ಶಕ್ತಿ ಹೊಂದಿದ್ದಾರೆ ಎಂದು ನಂಬಲಾಗಿತ್ತು. ತಮ್ಮ ಅನುಯಾಯಿಗಳ ಮೇಲೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಬಹಳ ವರ್ಷಗಳಿಂದ ಕೇಳಿಬಂದಿತ್ತು.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಹಲವಾರು ಅನುಯಾಯಿಗಳ ಕಣ್ಮರೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಈತನನ್ನು ಬಂಧಿಸಲಾಗಿದ್ದು, ಈತನ ಬಂಧನವನ್ನು ಪೊಲೀಸರು ಬುಧವಾರ ದೃಢಪಡಿಸಿದ್ದಾರೆ.