
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಲುಕಿರುವ ನಟಿ ರನ್ಯಾ ರಾವ್ ಗೆ ಏಕಕಾಲದಲ್ಲಿ ಮೂರು ತನಿಖೆ ಎದುರಿಸಬೇಕಾದ ಸಂಕಷ್ಟದಲ್ಲಿದ್ದಾರೆ. ಒಂದೆಡೆ ಸಿಬಿಐ, ಮತ್ತೊಂದೆಡೆ ಇಡಿ ಹಾಗೂ ಡಿಆರ್ ಐ ಅಧಿಕಾರಿಗಳು ಒಮ್ಮೆಲೆ ತನಿಖೆ ಪ್ರಾರಂಭಿಸಿದ್ದಾರೆ.
ಇನ್ನೊಂದೆಡೆ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿಗೂ ಸಂಕಷ್ಟ ಎದುರಾಗಿದೆ. ಜತಿನ್ ನಿವಾಸದ ಮೇಲೆ ಡಿಆರ್ ಐ ಅಧಿಕಾರಿಗಳು ದಾಲಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಟಿ ರನ್ಯಾ ರಾವ್ ಡುಬೈಗೆ ತೆರಳಲು ಪತಿ ಜತಿನ್ ಹುಕ್ಕೇರಿ ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಡಿಆರ್ ಐ ಅಧಿಕಾರಿಗಳು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿರುವ ಜತಿನ್ ನಿವಾಸ ಪ್ರೆಸ್ಟೀಜ್ ಅಕ್ರಾಪೊಲಿಸ್ ಅಪಾರ್ಟ್ ಮೆಂಟ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.