
ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರನ್ಯಾ ರಾವ್, ಕೇಸ್ ನಲ್ಲಿ ಕೆಲ ಸಚಿವರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ರನ್ಯಾ ರಾವ್ ರಕ್ಷಣೆಗೆ ಕಾಂಗ್ರೆಸ್ ನ ಕೆಲ ಸಚಿವರು ಯತ್ನಿಸಿದ್ದಾರೆ. ರನ್ಯಾ ರಾವ್ ಕೆಲ ಸಚಿವರಿಗೆ ಕರೆ ಮಾಡಿದ್ದಾಳೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ.
ರನ್ಯಾ ರಾವ್ ರಕ್ಷಿಸಲು ಕೆಲ ಸಚೊವರಿಂದಲೇ ಪ್ರಯತ್ನ ನಡೆದಿದೆ. ಸಚಿವರುಗಳು ತಮ್ಮ ಪ್ರಭಾವ ಬೀರಿ ಒತ್ತಡ ಹಾಕುತ್ತಿದ್ದಾರೆ ಎಂದರು. ಈಗ ಸಿಬಿಐ ಈ ಪ್ರಕರಣದ ತನಿಖೆ ನಡೆಸಲು ಮುಂದಾಗಿರುವುದರಿಂದ ಇದರ ಹಿಂದೆ ಯಾರೆಲ್ಲ ಇದ್ದಾರೆ? ಯಾರ ಕೈವಾಡವಿದೆ ಎಂಬುದು ಗೊತ್ತಾಗಲಿದೆ ಎಂದರು.
ಸಿಬಿಐ ತನಿಖಾ ವರದಿಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ಕ್ರಿಮಿನಲ್ ಕೇಸ್. ಆಕೆ ಒಡೆತನದ ಕಂಪನಿಗೆ ಭೂಮಿ ಮಂಜೂರು ಮಾಡಿರುವುದರಲ್ಲಿ ತಪ್ಪಿದ್ದರೆ ಅದರ ಬಗ್ಗೆಯೂ ತನಿಖೆಯಾಗಲಿ ಎಂದರು.