
ಬೆಂಗಳೂರು: ನಟಿ ರನ್ಯಾ ರಾವ್ ಕಂಪನಿಗೆ ಕೆಐಎಡಿಬಿಯಿಂದ ಜಮೀನು ಮಂಜೂರು ಮಾಡಿಲ್ಲ ಎಂದು ಕೆಐಎಡಿಬಿ ಸಿಇಓ ಡಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.
ರನ್ಯಾ ರಾವ್ ನಿರ್ದೇಶನದ ಕಂಪನಿಗೆ ತುಮಕೂರು ಬಳಿ ಶಿರಾದಲ್ಲಿ ಸರ್ಕಾರದ ವತಿಯಿಂದ 12 ಎಕರೆ ಜಮೀನು ಮಂಜೂರಾಗಿದೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಾ.ಮಹೇಶ್ ಶಿರಾ ಬಳಿ ಮಂಜೂರು ಆಗಿರುವ ಜಾಗ ಕೆಐಎಡಿಬಿ ವಶದಲ್ಲಿಯೇ ಇದೆ. ಈ ಬಗ್ಗೆ ತುಮಕೂರಿನ ಅಧಿಕಾರಿಗಳ ಜೊತೆಗೂ ಮಾತನಾಡಿದ್ದೇನೆ. ಈವರೆಗೂ ಕಂಪನಿ ಜಾಗವನ್ನು ಹಣ ಕಟ್ಟಿ ತನ್ನ ಸ್ವಂತಕ್ಕೆ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
2023ರ ಜನವರಿ 25ರಂದು ಸಚಿವರು ಹಾಗೂ ಸದಸ್ಯರನ್ನು ಒಳಗೊಂಡ ಸ್ಟೇಟ್ ಲೆವಲ್ ವಿಂಡೋ ಕಮಿಟಿ ಕ್ಲಿಯರೆನ್ಸ್ ಕೊಟ್ಟಿದೆ. ಕಮಿಟಿ ಕ್ಲಿಯರೆನ್ಸ್ ಕೊಟ್ಟ ಮೇಲೆ ಕಂಪನಿ ಕಡೆಯಿಂದ ಜಾಗ ಮಂಜೂರು ಮಾಡುವಂತೆ ಕೇಳಿಲ್ಲ. ಹಾಗಾಗಿ ಕೆಐಎಡಿಬಿಯಿಂದ ಯಾವುದೇ ಜಾಗ ಮಂಜೂರಾಗಿಲ್ಲ. ಕಮಿಟಿಯಲ್ಲಿ ಕ್ಲಿಯರೆನ್ಸ್ ಸಿಕ್ಕ ಬಳಿಕ ಜಾಗ ಪಡೆಯಲು ಎರಡು ವರ್ಷ ಕಾಲಾವಕಾಶವಿರುತ್ತದೆ. ಕ್ಲಿಯರೆನ್ಸ್ ಸಿಕ್ಕಿಯೇ ಎರಡು ವರ್ಷ ಮುಗಿದಿದೆ. ಹಾಗಾಗಿ ಜಾಗ ಈಗ ಮಂಜೂರು ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.