
ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಫೋಟೋಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಗುರುವಾರ ಸಂಜೆ ಅವರು ಮ್ಯಾಗಜೀನ್ನ ಕವರ್ ಪೇಜ್ಗೆ ಪೋಸ್ ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಶನ್ ಸೃಷ್ಟಿಯಾಯಿತು. ಅವರ ಬ್ರೇವ್ ಫೋಟೋಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಸಾಕಷ್ಟು ಮೆಮೆ -ಟ್ರೀಟ್ಮೆಂಟ್ ಕೂಡ ನೀಡುತ್ತಿದ್ದಾರೆ.
ತಮ್ಮ ಫ್ಯಾಶನ್ ಆಯ್ಕೆಗಳೊಂದಿಗೆ ಗಮನ ಸೆಳೆಯುವ ರಣವೀರ್, ಡ್ರೆಸ್ ನಿಯಮಗಳನ್ನು ಉಲ್ಲಂಘಿಸಿ ಸ್ಕರ್ಟ್& ಪ್ಯಾಂಟ್ಗಳನ್ನು ವಿನಿಮಯ ಮಾಡಿಕೊಂಡಿದ್ದೂ ಇದೆ. ಆದರೆ ಈ ಬಾರಿ ಪರಿರ್ಪೂಣವಾಗಿ ಬೆತ್ತಲೆಯಾಗಿ ಪೋಸ್ ನೀಡಿದ್ದಾರೆ.
ಫೋಟೋಗಳು ಅತಿ ವೇಗದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿದೆ. ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ ಅವರು ಬೆತ್ತಲೆ ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ನೆಟ್ಟಿಗರಲ್ಲಿ ಕೆಲವರು ಆತನನನ್ನು “ಧೈರ್ಯಶಾಲಿ” ಎಂದು ಶ್ಲಾಘಿಸಿದ್ದಾರೆ. ಆತನ ಮೈಕಟ್ಟು ಮತ್ತು ಅವರು ಮಾಡಿದ ಕಠಿಣ ಪರಿಶ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲ್ ಕೂಡ ಆಗಿದ್ದು, ಜೋಕ್ಗಳು, ಮೆಮ್ಗಳು ಹುಟ್ಟಿಕೊಂಡಿವೆ.
