
ಜುನಾಗಢ: ದೇಶದ ಹಲವು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಅದರಲ್ಲಿಯೂ ಗುಜರಾತ್ ನಲ್ಲಿ ಮಹಾ ಮಳೆ ಜಲಪ್ರಳಯದ ಆತಂಕ ಸೃಷ್ಟಿಸಿದೆ. ಜುನಾಗಢ, ನವಸಾರಿ ಪ್ರದೇಶಗಳಲ್ಲಿ ರಣ ಭೀಕರ ಪ್ರವಾಹಕ್ಕೆ ರಸ್ತೆಗಳಿಗೆ ನೀರು ರಭಸವಾಗಿ ನುಗ್ಗುತ್ತಿದ್ದು, ವಾಹನಗಳೇ ನೀರಿನಲ್ಲಿ ಕೊಚ್ಚಿ ಹೋಗಿವೆ.
ಗುಜರಾತ್ ನ ಜುನಾಗಢ, ನವಸಾರಿ ಪ್ರದೇಶಗಳು ಮುಳುಗಡೆಯಾಗಿದ್ದು, ಪ್ರವಾಹದ ತೀವ್ರತೆಗೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ ಗಳು, ರಸ್ತೆಯಲ್ಲಿದ್ದ ಕಾರು, ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ನೋಡ ನೋಡುತ್ತಿದ್ದಂತೆ ಕಾಲ್ವಾ ನದಿ ಉಕ್ಕಿ ಹರಿದಿದ್ದು, ಏಕಾಏಕಿ ರಸ್ತೆಗಳು, ಮನೆಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಸ್ಥಳೀಯರು ಪ್ರಾಣದ ಹಂಗು ತೊರೆದು ರಕ್ಷಿಸಿರುವ ದೃಶ್ಯ ಎದೆ ಝಲ್ ಎನಿಸುವಂತಿದೆ. ರಣ ಭೀಕರ ಪ್ರವಾಹದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್ ಜುನಾಘಡದ ಪ್ರತಿಷ್ಠಿತ ಏರಿಯಾಗಳಲ್ಲೇ ಜಲಪ್ರಳಯ ಸಂಭವಿಸಿದ್ದು, ಅಪಾರ್ಟ್ ಮೆಂಟ್ ಗಳ ಬೇಸ್ ಮೆಂಟ್ ಗಳಿಗೆ ನೀರು ನುಗ್ಗಿವೆ. ನಿವಾಸಿಗಳು ಜೀವಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.