ಶಿವಮೊಗ್ಗ : ಶಿವಮೊಗ್ಗ ರಂಗಾಯಣದ ವತಿಯಿಂದ ಏ.12 ರಿಂದ ಮೇ.4 ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ “ಚಿಣ್ಣರ ಸಿಹಿಮೊಗೆ” ಎಂಬ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಕಥೆ ಹೇಳುವುದು, ಬಣ್ಣಗಳ ಆಟ, ರಂಗಾಟ, ನಾಟಕ, ಮೈಮ್, ಜನಪದಗೀತೆ, ಜನಪದನೃತ್ಯ, ಜನಪದ ಆಟ, ಮಣ್ಣಿನ ಆಟ, ಮ್ಯಾಜಿಕ್ ಷೋ, ಮಕ್ಕಳ ಸಂತೆ, ರಂಗಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವಿಕ್ಷಣೆ, ಪ್ರವಾಸ, ಮಡಿಕೆ ತಯಾರಿ, ಪರಿಸರದ ಸಂಬಂಧಿಸಿದ ಪೂರಕ ಕಲೆಯನ್ನು ಕಲಿಸಲಾಗುವುದು. ಶಿಬಿರದ ಕೊನೆಯ ಮೂರು ದಿನಗಳು ಶಿಬಿರಾರ್ಥಿಗಳ ನಾಟಕ, ಕಲೆಯನ್ನು ರಂಗಾಯಣ “ ಚಿಣ್ಣರ ಸಿಹಿಮೊಗೆ” ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು.
ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. 8 ರಿಂದ 13 ವರ್ಷದ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದ 150 ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಮಾನ್ಯತೆ ನೀಡಲಾಗುತ್ತದೆ. ಪ್ರವೇಶ ಶುಲ್ಕ ರೂ.3000 ಇದ್ದು, ಆಸಕ್ತರು ಏ.1 ರಂದು ರಂಗಾಯಣದ ಕಚೇರಿಯಲ್ಲಿ ಅರ್ಜಿ ಪಡೆಯಬೇಕು. ಪ್ರವೇಶ ಪಡೆಯಲು ಎರಡು ಪಾಸ್‌ಪೋರ್ಟ್ ಫೋಟೋ, ಜನನ ಪ್ರಮಾಣ ಪತ್ರ ಅಥವಾ ಅಧಾರ್ ಕಾರ್ಡ್ ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ದೂ.ಸಂ:08182256353 ನ್ನು ಸಂಪರ್ಕಿಸಬಹುದು ಎಂದು ರಂಗಾಯಣ ನಿರ್ದೇಶಕರು ತಿಳಿಸಿದ್ದಾರೆ.