ಹುಟ್ಟು ಹಬ್ಬದ ಸಂಭ್ರಮದಲ್ಲಿ ರಣಬೀರ್ ಕಪೂರ್ 28-09-2024 2:11PM IST / No Comments / Posted In: Featured News, Live News, Entertainment ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1999ರಲ್ಲಿ ತೆರೆಕಂಡ ರಿಷಿ ಕಪೂರ್ ನಿರ್ದೇಶನದ ‘ಆ ಅಬ್ ಲೌಟ್ ಚಲೆನ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. 2007 ರಲ್ಲಿ ‘ಸಾವರಿಯಾ’ ದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡರು. ಇವರಿಗೆ ಜೋಡಿಯಾಗಿ ಸೋನಮ್ ಕಪೂರ್ ಅಭಿನಯಿಸಿದ್ದರು. ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡ ರಣಬೀರ್ ಕಪೂರ್ ಗೆ ಬಳಿಕ ಸಾಲು ಸಾಲು ಆಫರ್ ಗಳು ಬಂದವು. ‘ಬಚ್ನಾ ಏ ಹಸೀನೋ’ ಸೇರಿದಂತೆ ‘ವೇಕ್ ಅಪ್ ಸಿದ್’ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಹಾಗೂ ‘ರಾಜ್ ನೀತಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಜನಪ್ರಿಯ ನಟನಾಗಿ ಹೊರಹೊಮ್ಮಿದರು. ಕಳೆದ ವರ್ಷ ಬಿಡುಗಡೆಯಾಗಿದ್ದ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಭರ್ಜರಿ ಯಶಸ್ಸು ಕಂಡಿದ್ದು, ಇತ್ತೀಚಿಗೆ ‘ರಾಮಾಯಣ’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇಂದು ಬಾಲಿವುಡ್ ಚಿತ್ರರಂಗದ ಹಲವಾರು ನಟ ನಟಿಯರು ರಣಬೀರ್ ಕಪೂರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. OMG! #RanbirKapoor to headline #Dhoom4…. Best news on his birthday!@yrf #sidk #siddharthkannan pic.twitter.com/54xqEDIQ2y — Siddharth R Kannan (@sidkannan) September 28, 2024