ಕಳೆದ ವರ್ಷ ತಮ್ಮ ಪುತ್ರಿ ರಾಹಾ ಕಪೂರ್ ಅವರನ್ನು ಸ್ವಾಗತಿಸಿದ ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಮಗಳ ಮುಖವನ್ನು ಮಾಧ್ಯಮಗಳಿಗೆ ತೋರಿಸದ ದಂಪತಿ ಕ್ರಿಸ್ ಮಸ್ ಪಾರ್ಟಿ ವೇಳೆ ಪಾಪರಾಜಿಗಳಿಗೆ ತಮ್ಮ ಮುದ್ದು ಮಗಳ ಮುಖ ತೋರಿಸಿದ್ದಾರೆ.
ಮಹೇಶ್ ಭಟ್ ನಿವಾಸದಲ್ಲಿ ಕ್ರಿಸ್ ಮಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ರಣಬೀರ್ ಕಪೂರ್ – ಆಲಿಯಾ ದಂಪತಿ ತಮ್ಮ ಮೊದಲ ಮಗಳು ರಾಹಾಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ. ನೀಲಿ ಕಣ್ಣುಗಳಿಂದ ಕಂಗೊಳಿಸಿದ ರಾಹಾ ಬಿಳಿ ಫ್ರಾಕ್, ಕೆಂಪು ಬಣ್ಣದ ವೆಲ್ ವೆಟ್ ಶೂನಲ್ಲಿ ಮುದ್ದಾಗಿ ಕಾಣಿಸಿದ್ದಳು. ರಾಹಾಳನ್ನು ಮೊದಲ ಬಾರಿಗೆ ನೋಡಿದ ಅನೇಕ ನೆಟ್ಟಿಗರು ಆಕೆಯು ತನ್ನ ತಾತನನ್ನು ಹೋಲುತ್ತಾಳೆ ಎಂದಿದ್ದಾರೆ.
ರಣಬೀರ್ ಕಪೂರ್ ತಂದೆ ದಿವಂಗತ ರಿಷಿ ಕಪೂರ್ ರಂತೆಯೇ ಇದ್ದಾಳೆ. ಆಕೆಯ ಕಣ್ಣುಗಳಂತೂ ರಿಷಿ ಕಪೂರ್ ಕಣ್ಣುಗಳಂತೆಯೇ ಇವೆ. ಜೂನಿಯರ್ ರಿಷಿ ಕಪೂರ್ ಎಂದು ಬಣ್ಣಿಸಿದ್ದಾರೆ.
2022 ನವೆಂಬರ್ 6 ರಂದು ಆಲಿಯಾ ಭಟ್ ರಾಹಾಗೆ ಜನ್ಮ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಈ ಸ್ಟಾರ್ ಜೋಡಿ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ.